ಸುಶಾಂತ್ ಗೆಳತಿ ನಟಿ ರಿಯಾಗೆ ರೇಪ್, ಕೊಲೆ ಬೆದರಿಕೆ

ಮುಂಬೈ: ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ರೇಪ್, ಕೊಲೆ ಬೆದರಿಕೆ ಬಂದಿದೆ. ತಮಗೆ ಬಂದ ಮೆಸೇಜ್ ಸ್ಕ್ರೀನ್ ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಒಂದು ತಿಂಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನ ಬಗ್ಗೆ ರಿಯಾ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಸುಶಾಂತ್ ಸಾವಿನ ಬಳಿಕ ರಿಯಾ ಅವರನ್ನ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಸುಶಾಂತ್ ಸಾವಿನ ಬಳಿಕ ರಿಯಾಗೆ ಈ ರೀತಿಯ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ವರದಿಯಾಗಿತ್ತು. ಇದೀಗ ರಿಯಾ ಇನ್‍ಸ್ಟಾದಲ್ಲಿ ಬೆದರಿಕೆ ಬಂದ ಸಂದೇಶದ ಸ್ಕ್ರೀನ್ ಶಾಟ್ ಹಂಚಿಕೊಂಡು ಸೈಬರ್ ಕ್ರೈಂ ವಿಭಾಗಕ್ಕೆ ಟ್ಯಾಗ್ ಮಾಡಿಕೊಂಡಿದ್ದಾರೆ.

ಬೆದರಿಕೆಯ ಸಂದೇಶ: ಒಂದು ವೇಳೆ ನೀನು ಆತ್ಮಹತ್ಯೆ ಮಾಡಿಕೊಳ್ಳದಿದ್ರೆ ನಿನ್ನನ್ನು ರೇಪ್‍ಗೈದು ಕೊಲೆ ಮಾಡುತ್ತೇವೆ. ನಿನ್ನ ಕೊಲೆ ಮಾಡಲು ಕೆಲವರನ್ನು ಕಳಿಸುತ್ತಿದ್ದೇನೆ ಎಂದು ಸಂದೇಶ ರಿಯಾಗೆ ಕಳುಹಿಸಲಾಗಿದೆ.

ರಿಯಾ ಪೋಸ್ಟ್: ಹಣಕ್ಕಾಗಿ ಯಾರನ್ನೂ ಬೇಕಾದ್ರೂ ಬಲೆಗೆ ಬೀಳಿಸಿಕೊಳ್ಳುವ ಅಂತಾ ಹೇಳಿದ್ರೂ ನಾನು ಸುಮ್ಮನಾದೆ. ನನ್ನ ಕೊಲೆಗಾರ್ತಿ ಎಂದು ಕರೆದ್ರೂ ನಾನು ಪ್ರತಿಕ್ರಿಯೆ ನೀಡಲಿಲ್ಲ. ನನ್ನ ನಡತೆಯ ಬಗ್ಗೆ ಮತನಾಡಿದ್ರೂ ಸುಮ್ಮನಾದೆ. ನನ್ನ ಬಗ್ಗೆ ಮಾತನಾಡಲು ನಿಮಗೆ ಅಧಿಕಾರ ನೀಡಿದ್ಯಾರು? ಒಂದು ವೇಳೆ ನಾನು ಅತ್ಮಹತ್ಯೆ ಮಾಡಿಕೊಳ್ಳದಿದ್ದರೆ ನನ್ನನ್ನು ರೇಪ್‍ಗೈದು ಕೊಲೆ ಮಾಡ್ತೀರಾ? ನಿಮ್ಮ ಮಾತಿನ ಗಂಭೀರತೆ ಗೊತ್ತಿದೆಯಾ? ಇದು ಕ್ರೈಂ. ಯಾವುದೇ ವ್ಯಕ್ತಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುವುದು ಕಾನೂನಿನ ಪ್ರಕಾರ ಅಪರಾಧ ಎಂದು ರಿಯಾ ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *