ಮಿಲಿಟರಿ ಮಾತುಕತೆ ಯಶಸ್ವಿ – ವಾಸ್ತವ ಗಡಿ ರೇಖೆಯಿಂದ ಹಿಂದೆ ಸರಿದ ಎರಡು ಸೇನೆಗಳು

ನವದೆಹಲಿ: ಮೂರನೇ ಹಂತದ ಮಿಲಿಟರಿ ಮಾತುಕತೆ ಬಳಿಕ ಚೀನಾ ಮತ್ತು ಭಾರತದ ಎರಡು ಸೇನೆಗಳು ವಾಸ್ತವ ಗಡಿ ರೇಖೆಯಿಂದ 1.5 ಕಿಲೋಮೀಟರ್ ಹಿಂದೆ ಸರಿದಿದ್ದು, ಪೂರ್ವ ಲಡಾಕ್ ಗಡಿಯಲ್ಲಿ ಸೃಷ್ಟಿಯಾಗಿದ್ದ ಉದ್ವಿಗ್ನ ಪರಿಸ್ಥಿತಿ ತಣ್ಣಗಾಗುವ ಲಕ್ಷಣಗಳು ಕಂಡು ಬರುತ್ತಿದೆ.

ಇಂದು ಬೆಳಗ್ಗೆ ಗಾಲ್ವಾನಾ ನದಿ ಕಣಿವೆ ಪ್ರದೇಶದಲ್ಲಿರುವ ಪಾಯಿಂಟ್ ನಂ. 14, ಬಿಸಿ ನೀರಿನ ಬುಗ್ಗೆಗಳು, ಗೋರ್ಗಾ ಪ್ರದೇಶದಿಂದ ಎರಡು ಸೇನೆಗಳು ಹಿಂದೆ ಸರಿದಿದೆ ಎಂದು ಮೂಲಗಳು ಹೇಳಿವೆ. ಚೀನಾ ಅತಿಕ್ರಮಣ ಮಾಡಿಕೊಂಡು ನಿರ್ಮಿಸಿದ್ದ ಟೆಂಟ್ ಗಳನ್ನು ತೆರವುಗೊಳಿಸಿದ್ದು, ಗಡಿಯಲ್ಲಿ ನಿಲ್ಲಿಸಿದ್ದ ಸೇನಾ ವಾಹನಗಳನ್ನು ಎರಡು ಕಿಮೀ ಹಿಂದೆ ಒಯ್ಯಲಾಗಿದೆ ಎಂದು ವರದಿಯಾಗಿದೆ.

ಜುಲೈ ಒಂದರಂದು ಲಡಾಕ್‍ನ ಚುಶುಲ್ ಪ್ರದೇಶದಲ್ಲಿ ಮೂರನೇ ಹಂತದ ಮಿಲಿಟರಿ ಮಾತುಕತೆ ನಡೆಯಿತು. ಭಾರತದಿಂದ ಲೆಫ್ಟಿನೆಂಟ್ ಜನರಲ್ ಹರೇಂದ್ರ ಸಿಂಗ್ ಮತ್ತು ಚೀನಾ ಸೇನೆ ಪರ ಮೇಜರ್ ಜನರಲ್ ಲಿಯು ಲೀನ್ ಭಾಗಿಯಾಗಿದ್ದರು. ಸಭೆಯಲ್ಲಿ ಉದ್ವಿಗ್ನತೆಯಲ್ಲಿರುವ ಭಾರತ ಚೀನಾ ಗಡಿ ಪ್ರದೇಶದಲ್ಲಿ ಶಾಂತಿ ಕಾಪಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆದಿತ್ತು. ಈ ಸಭೆ ಬಳಿಕ ಮಹತ್ವದ ಬೆಳವಣಿಗೆ ನಡೆದಿದೆ.

ಮಾತುಕತೆ ಉಲ್ಲಂಘಿಸಿದ್ದ ಚೀನಾ: ಚೀನಾ ಮಾತುಕತೆ ಬಳಿಕ ಗಡಿಯಿಂದ ಹಿಂದೆ ಸರಿಯುತ್ತಿರುವವುದು ಇದೇ ಮೊದಲಲ್ಲ. ಹಿಂದೆ ಜೂನ್ ಆರರಂದು ನಡೆದ ಸಭೆ ಬಳಿಕ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ವಾಸ್ತವ ಗಡಿ ರೇಖೆಯಿಂದ 2.5 ಕಿಮೀ ಹಿಂದೆ ಸರಿದಿತ್ತು. ಆದರೆ ಸೇನಾ ಟೆಂಟುಗಳನ್ನು ತೆರವುಗೊಳಿಸಿರಲಿಲ್ಲ. ಈ ವಿಚಾರಕ್ಕೆ ಘರ್ಷಣೆ ನಡೆದು ಭಾರತದ 20 ಸೈನಿಕರ ಹುತಾತ್ಮರಾಗಿದ್ದರು.

ಈಗಲೂ ಚೀನಾ ಎಲ್‍ಎಸಿಯಿಂದ 1.5 ಕಿಮೀ ಹಿಂದೆ ಸರಿದಿದ್ದು ಈ ಬಾರಿ ವಿಶೇಷ ಎನ್ನುವಂತೆ ತನ್ನ ಸೇನಾ ಡೇರೆಗಳನ್ನು ತೆರವು ಮಾಡಿದೆ ಎನ್ನಲಾಗಿದೆ. ಆದರೆ ಗಡಿಯಲ್ಲಿ ಭದ್ರತೆ ಹೆಚ್ಚಳ ಮತ್ತು ಶಸ್ತ್ರಾಸ್ತ್ರ ಸಂಗ್ರಹ ಪ್ರಕ್ರಿಯೆ ನಿಲ್ಲಿಸಿಲ್ಲ ಎನ್ನಲಾಗಿದ್ದು ಈ ಹಿನ್ನೆಲೆ ಚೀನಾವನ್ನು ಪೂರ್ಣ ಪ್ರಮಾಣದಲ್ಲಿ ನಂಬಲೂ ಸಾಧ್ಯವಿಲ್ಲ. ಚೀನಾದ ಸೇನೆ ಮತ್ತೆ ಗಡಿ ಅತಿಕ್ರಮಣ ಮಾಡಿಕೊಳ್ಳುವ ಸಾಧ್ಯತೆ ಇದ್ದು ಎಲ್‍ಎಸಿಯಿಂದ ಒಂದೂವರೆ ಕಿಮೀ ಹಿಂದೆ ಭಾರತ ತನ್ನ ಭದ್ರತೆಯನ್ನು ಹೆಚ್ಚಿಸಿಕೊಂಡಿದೆ.

ಬಫರ್ ಝೋನ್: ಎರಡು ಸೇನೆ ಮೂರನೇ ಹಂತದ ಮಾತುಕತೆಯಲ್ಲಿ ಬಫರ್ ಝೋನ್ ಮಾಡಿಕೊಳ್ಳುವ ಪ್ರಸ್ತಾಪ ಮಾಡಿಕೊಂಡಿದ್ದು ಎಲ್‍ಎಸಿಯಿಂದ 1.5 ಕಿಮೀ ಹಿಂದೆ ಬಫರ್ ಮಾಡಿಕೊಂಡಿದ್ದಾರೆ. ಅದಕ್ಕೆ 1.5 ಹಿಂದೆ ಸರಿದಿದ್ದಾರೆ. ಇನ್ಮುಂದೆ ಬಫರ್ ಝೋನ್ ಕ್ರಾಸ್ ಮಾಡುವಂತಿಲ್ಲ

Comments

Leave a Reply

Your email address will not be published. Required fields are marked *