ಕರುನಾಡಲ್ಲಿ 33 ಗಂಟೆಗಳ ಲಾಕ್‍ಡೌನ್ ಆರಂಭ – ಭಾನುವಾರ ಏನಿರುತ್ತೆ? ಏನಿರಲ್ಲ?

ಬೆಂಗಳೂರು: ನಿಯಂತ್ರಣಕ್ಕೆ ಸಿಗದ ಕೊರೊನಾ ಹೆಮ್ಮಾರಿಗೆ ಮೂಗುದಾರ ಹಾಕೋಕೆ ರಾಜ್ಯ ಸರ್ಕಾರ ದೂರಗಾಮಿ ಅಲ್ಲದ, ಅರ್ಧಂಬರ್ಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಣಾಮ ನಾಳೆ ಮೊದಲ ಸಂಡೇ ಲಾಕ್‍ಡೌನ್ ಜಾರಿಗೆ ಬರಲಿದೆ. ರಾತ್ರಿ 8 ರಿಂದಲೇ ರಾತ್ರಿ ಕರ್ಫ್ಯೂ ಜಾರಿ ಇರುವ ಕಾರಣ, ಇವತ್ತಿನಿಂದಲೇ ಲಾಕ್‍ಡೌನ್ ಶುರುವಾದಂತೆ ಆಗಿದೆ. ಸೋಮವಾರ ನಸುಕಿನ ಜಾವ ಐದು ಗಂಟೆಯವರೆಗೂ ಅಂದ್ರೆ 33 ಗಂಟೆಗಳ ಕಾಲ ಈ ಲಾಕ್‍ಡೌನ್ ಎಫೆಕ್ಟ್ ಜಾರಿಯಲ್ಲಿ ಇರಲಿದೆ.

ಈಗಾಗಲೇ ಬೆಂಗಳೂರಿನ ಎಲ್ಲಾ ಫ್ಲೈ ಓವರ್ ಬಂದ್ ಆಗಿವೆ. ಅಂಗಡಿ ಮುಂಗಟ್ಟು ಮುಚ್ಚಿವೆ. ಜನ ಸಂಚಾರ ವಿರಳವಾಗಿದೆ. ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರ ಮಾತ್ರ ಅಲ್ಲಲ್ಲಿ ಕಂಡುಬರ್ತಿದೆ. ಭಾನುವಾರ ಮನೆಯಿಂದ ಯಾರು ಹೊರಗೆ ಬರಬಾರದು. ಒಂದು ವೇಳೆ ಯಾರಾದ್ರೂ ಹೊರಗೆ ಬಂದ್ರೆ ದಂಡ, ಕೇಸ್ ಜೊತೆಗೆ ಲಾಠಿ ರುಚಿಯನ್ನು ತಿನ್ನಬೇಕಾಗುತ್ತೆ ಎಂದು ಪೊಲೀಸ್ ಆಯುಕ್ತರು, ಬಿಬಿಎಂಪಿ ಆಯುಕ್ತರು ಎಚ್ಚರಿಸಿದ್ದಾರೆ.

ಸಿಲಿಕಾನ್ ಸಿಟಿ ಸಂಪರ್ಕಿಸುವ ಎಲ್ಲಾ ಗಡಿಗಳಲ್ಲಿ ಕಟ್ಟುನಿಟ್ಟಿನ ತಡೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೋ ಬಳಿ, ಮೈಸೂರು ರಸ್ತೆಯಲ್ಲಿ ನೈಸ್ ಬ್ರಿಡ್ಜ್ ಬಳಿ, ಕೆಆರ್ ಪುರಂ ಬಳಿ, ಹೊಸೂರು ರಸ್ತೆಯಲ್ಲಿ ಹೀಗೆ ಎಲ್ಲಾ ಕಡೆ ಚೆಕ್ ಪೊಲೀಸ್ ಚೆಕ್‍ಪೋಸ್ಟ್ ಇರಲಿದೆ. ಏರ್ ಪೋರ್ಟ್‍ಗೆ ತೆರಳೋರಿಗೆ ವಿನಾಯ್ತಿ ಇರಲಿದೆ. ಲಾಕ್‍ಡೌನ್ ಕಾರಣ ಸಂಜೆ ಮದ್ಯದ ಅಂಗಡಿಗಳ ಮುಂದೆ ಜನ ಮುಗಿಬಿದ್ದಿದ್ದರು.

ಸಂಡೆ ಲಾಕ್‍ಡೌನ್: ನಾಳೆ ಏನಿರುತ್ತೆ?
* ಮೀನು, ಮಾಂಸದ ಅಂಗಡಿಗಳು ಓಪನ್
* ಹಣ್ಣು, ತರಕಾರಿ, ದಿನಸಿ ಅಂಗಡಿ ತೆರೆಯಬಹುದು
* ಆಸ್ಪತ್ರೆ, ಮೆಡಿಕಲ್ ಸ್ಟೋರ್ ಓಪನ್
* ಡಾಕ್ಟರ್ಸ್, ನರ್ಸ್, ಆಂಬ್ಯುಲೆನ್ಸ್ ಸಂಚಾರಕ್ಕೆ ಅವಕಾಶ
* ರೋಗಿಗಳು, ಗರ್ಭಿಣಿಯರು ಆಸ್ಪತ್ರೆಗೆ ಹೋಗಬಹುದು
* ಹೋಟೆಲ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ
* ಎಂದಿನಂತೆ ಸಿಲಿಂಡರ್ ಗ್ಯಾಸ್, ಹಾಲು, ದಿನಪತ್ರಿಕೆ
* ಸರಕು ಸಾಗಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ

ಸಂಡೆ ಲಾಕ್‍ಡೌನ್: ನಾಳೆ ಏನಿರಲ್ಲ?
* ತುರ್ತು ಅವಶ್ಯಕ ಸೇವೆ ಹೊರತುಪಡಿಸಿ ಉಳಿದ ಸೇವೆ ಬಂದ್
* ಸರ್ಕಾರಿ/ಖಾಸಗಿ ಬಸ್‍ಗಳ ಸಂಚಾರ ಸ್ಥಗಿತ
* ಆಟೋ, ಟ್ಯಾಕ್ಸಿ, ಖಾಸಗಿ ವಾಹನಗಳ ಸಂಚಾರ ನಿರ್ಬಂಧ
* ತುರ್ತು ಕೆಲಸ ಹೊರತು ಜನ ಹೊರಗೆ ಬರುವಂತಿಲ್ಲ
* ಪಾರ್ಕ್, ಸಲೂನ್ ಶಾಪ್, ಬ್ಯೂಟಿ ಪಾರ್ಲರ್ ಗಳು ಬಂದ್
* ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ, ಮೆಕಾನಿಕ್ ಅಂಗಡಿ, ಶೋರೂಂ ಲಾಕ್
* ಮಾಲ್‍ಗಳು, ಸೂಪರ್ ಮಾರ್ಕೆಟ್‍ಗಳು ಬಾಗಿಲು ತೆರೆಯಲ್ಲ
* ಕೈಗಾರಿಕೆಗಳು, ಖಾಸಗಿ ಕಂಪನಿಗಳು ಕಾರ್ಯನಿರ್ವಹಿಸುವಂತೆ ಇಲ್ಲ
* ಮದ್ಯದ ಅಂಗಡಿಗಳು ಬಂದ್, ಪಾರ್ಸಲ್ ಕೂಡ ಸಿಗಲ್ಲ.
* ದೇವಸ್ಥಾನ, ಮಸೀದಿ, ಚರ್ಚ್ ಓಪನ್ ಇರಲ್ಲ
* ಲಾಲ್‍ಬಾಗ್ ಸೇರಿದಂತೆ ಪಾರ್ಕ್ ಗಳು ಬಂದ್


Comments

Leave a Reply

Your email address will not be published. Required fields are marked *