ಗೋಲಿಬಾರ್, ಬಾಂಬ್ ಪ್ರಕರಣ ನಿಭಾಯಿಸಿದ್ದ ಮಂಗಳೂರು ಕಮಿಷನರ್ ಹರ್ಷಾ ವರ್ಗ

– ತುಳುವಿನಲ್ಲೇ ಜನತೆಗೆ ಭಾವನಾತ್ಮಕ ವಿದಾಯ ಹೇಳಿದ ಡಾ.ಪಿ.ಎಸ್.ಹರ್ಷಾ

ಮಂಗಳೂರು: ನಗರ ಪೊಲೀಸ್ ಆಯುಕ್ತರಾಗಿದ್ದ, ಇದೀಗ ವಾರ್ತಾ ಇಲಾಖೆಯ ಆಯುಕ್ತರಾಗಿ ಬೆಂಗಳೂರಿಗೆ ವರ್ಗಾವಣೆಯಾದ ಡಾ.ಪಿ.ಎಸ್.ಹರ್ಷ ಅವರು ಮಂಗಳೂರಿನ ಜನತೆಯ ಜೊತೆಗೆ ಬಹಳಷ್ಟು ಒಡನಾಟ ಹೊಂದಿದ್ದರು. ಹೀಗಾಗಿ ತಾನು ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಮಂಗಳೂರಿನ ಜನತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಹುಸಂಖ್ಯಾತರ ಮಾತೃ ಭಾಷೆಯಾದ ತುಳುವಿನಲ್ಲಿ ಪ್ರೀತಿ ಪೂರ್ವಕವಾಗಿ ವಿದಾಯ ಪತ್ರ ಬರೆದಿದ್ದಾರೆ.

ಮಂಗಳೂರು ಸಿಟಿ ಪೊಲೀಸ್ ಫೇಸ್ಬುಕ್ ಪೇಜ್‍ನಲ್ಲಿ ಪತ್ರ ಬರೆದಿರುವ ಅವರು, ಇಡೀ ಪತ್ರವನ್ನು ತುಳು ಭಾಷೆಯಲ್ಲಿಯೇ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ. ಕುಡ್ಲದ ಎನ್ನ ಮೋಕೆದ ಜನಕುಲೇ(ಮಂಗಳೂರಿನ ನನ್ನ ಪ್ರೀತಿಯ ಜನರೇ) ಎಂದು ಆರಂಭಿಸಿ, ಅಧಿಕಾರಿದ ಅವಧಿಯಲ್ಲಿ ನಡೆದ ಎಲ್ಲ ಘಟನೆಗಳನ್ನು ತುಳುವಿನಲ್ಲೇ ವಿವರಿಸಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತುಳು ಭಾಷೆಯಲ್ಲೆ ಹೇಳಿರುವುದು ವಿಶೇಷವಾಗಿದೆ.

https://www.facebook.com/MangaluruCityPolice/photos/a.1924100667625353/3082831651752243

ಮಂಗಳೂರಿನಲ್ಲಿ ಮೈ ಬೀಟ್ ಮೈ ಪ್ರೈಡ್ ಎನ್ನುವ ಹೊಸ ಯೋಜನೆಯ ಮೂಲಕ ನೇರವಾಗಿ ಜನರ ಬಳಿಯೇ ಪೊಲೀಸರು ಸಮಸ್ಯೆಗಳನ್ನು ಆಲಿಸುವ, ಮಾಹಿತಿ ಸಂಗ್ರಹಿಸುವ ಕೆಲಸ ಮಾಡಿದ್ದ ಹರ್ಷಾ ಅವರು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಮಾತ್ರವಲ್ಲದೆ ಇತ್ತೀಚೆಗೆ ನಡೆದ ಎನ್‍ಆರ್‍ಸಿ ಹೋರಾಟ, ಗೋಲಿಬಾರ್, ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಅಧಿಕಾರಿ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದರು.

Comments

Leave a Reply

Your email address will not be published. Required fields are marked *