ಕೊರೊನಾಗೆ ದೆಹಲಿ ಮಾಜಿ ಕ್ರಿಕೆಟಿಗ ಸಂಜಯ್ ದೋಬಲ್ ಸಾವು

ನವದೆಹಲಿ: ಕೊರೊನಾ ವೈರಸ್ ಸೋಂಕಿನ ಕಾರಣದಿಂದ ದೆಹಲಿ ತಂಡದ ಮಾಜಿ ಆಲ್‍ರೌಂಡರ್ ಸಂಜಯ್ ದೋಬಲ್ (52) ಸಾವನ್ನಪ್ಪಿದ್ದಾರೆ.

ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಸಂಜಯ್ ದೋಬಲ್ ಬಳಲುತ್ತಿದ್ದರು ಎಂದು ಒಂದು ಕಾಲದ ಸಹ ಆಟಗಾರ ಮಿಥುನ್ ಮನ್ಹಾಸ್ ಮಾಹಿತಿ ನೀಡಿದ್ದು, ಕೆಲ ಸಮಯದಿಂದ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ವೇಳೆಯೇ ಅವರಿಗೆ ಸೋಂಕಿರುವುದು ದೃಢವಾಗಿತ್ತು ಎಂದು ವಿವರಿಸಿದ್ದಾರೆ. ಮೃತರು ಪತ್ನಿ, ರಣಜಿ ಕ್ರಿಕೆಟ್ ಆಟಗಾರರಾಗಿರುವ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕಳೆದ ಭಾನುವಾರ ಸಂಜಯ್ ಅವರಿಗೆ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿತ್ತು. ಪರಿಣಾಮ ಶೀಘ್ರವೇ ಅವರಿಗೆ ಪ್ಲಾಸ್ಮಾ ಚಿಕಿತ್ಸೆ ಕೊಡಿಸಿದ್ದೇವು. ಆದರೆ ಅಂದೇ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.

ಸಂಜಯ್ ಅವರು ಬ್ಯಾಟ್ಸ್ ಮನ್ ಆಗಿ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ್ದ ಸಂಜಯ್ ಅವರು ಬಳಿಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆಟಗಾರರ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡಲು ಹೇಳುತ್ತಿದ್ದರು. ಯುವಕರಿಗೂ ಫಿಟ್ನೆಸ್ ಕಾಯ್ದುಕೊಳ್ಳಲು ಸಲಹೆ ನೀಡುತ್ತಿದ್ದರು ಎಂದು ಮಿಥುನ್ ಹೇಳಿದ್ದಾರೆ. ಇತ್ತ ದೆಹಲಿ ತಂಡದಲ್ಲಿ ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ ಮನ್ ಆಗಿ ಕಣಕ್ಕಿಗಳಿಯುತ್ತಿದ್ದ ಸಂಜಯ್ ಅವರು, ಆಫ್ ಸ್ಪಿನ್ನರ್ ಆಗಿ ತಂಡ ಜಯಕ್ಕೆ ಕಾಣಿಕೆ ನೀಡುತ್ತಿದ್ದರು ಎಂದು ಸಂಜಯ್ ಅವರ ಸಹ ಆಟಗಾರರು ನೆನಪಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *