ಕೊಡಗಿನ ಕೊರೊನಾ ನಂಜಿನಿಂದ ಗದಗ ಜಿಲ್ಲೆ ಪೊಲೀಸ್ ಠಾಣೆ ಸೀಲ್‍ಡೌನ್

ಗದಗ: ಕೊಡಗು ಜಿಲ್ಲೆಯ ಕೊರೊನಾ ಸೋಂಕಿತ ವ್ಯಕ್ತಿಯೋರ್ವನಿಂದ ಪೊಲೀಸ್ ಠಾಣೆ ಸೀಲ್ ಆಗಿರುವ ಘಟನೆ ಜಿಲ್ಲೆ ಮುಂಡರಗಿನಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ಪಿ-9215ರ ವ್ಯಕ್ತಿ ದಿನಾಂಕ 18 ರಂದು ಖಾಸಗಿ ವಿಷಯಕ್ಕೆ ಸಂಬಂಧಿಸಿದಂತೆ ಕೊಡಗಿನಿಂದ ಮುಂಡರಗಿ ಠಾಣೆಗೆ ಬಂದಿದ್ದ. ಆದರೆ ಸೋಮುವಾರದ ಹೆಲ್ತ್ ಬುಲೆಟಿನ್‍ನಲ್ಲಿ ಆ ವ್ಯಕ್ತಿಗೆ ಪಾಸಿಟಿವ್ ದೃಢವಾಗಿದೆ. ಇದರಿಂದ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸೈನಿಟೈಜ್ ಮಾಡಲಾಗಿದೆ. ಜೊತೆಗೆ ಪೊಲೀಸ್ ಠಾಣೆ ಒಳಗಡೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಠಾಣೆಯ ಸುತ್ತಲು ಬ್ಯಾರಿಕೇಡ್ ಹಾಕಿ, ಸೈನಿಟೆಜರ್ ಅಳವಡಿಸಲಾಗಿದೆ. ಠಾಣೆಯ ಹೊರಭಾಗ ಸಾರ್ವಜನಿಕರ ಸಮಸ್ಯೆ ಆಲಿಸಲು ವ್ಯವಸ್ಥೆ ಮಾಡಲಾಗಿದೆ. ಕೊಡಗಿನ ಸೋಂಕಿತನೊಂದಿಗೆ ಸಂಪರ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಆರೋಗ್ಯ ತಪಾಸಣೆ ಒಳಪಡಿಸಲಾಗಿದೆ. ವರದಿಗಾಗಿ ಜಿಲ್ಲಾಡಳಿತ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಕಾಯುತ್ತಿದೆ. ಈ ಘಟನೆಯಿಂದ ಗದಗ ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಯಲ್ಲಿ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡಿದೆ.

Comments

Leave a Reply

Your email address will not be published. Required fields are marked *