8 ಮಂದಿ ಸೆಲಿಬ್ರಿಟಿಗಳನ್ನ ಬಿಟ್ಟು ಎಲ್ಲರನ್ನ ಅನ್ ಫಾಲೋ ಮಾಡಿದ ಕರಣ್ ಜೋಹರ್

ಮುಂಬೈ: ಯುವ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಬಾಲಿವುಡ್‍ನಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಸುಶಾಂತ್ ಸಿಂಗ್ ಸಾವಿಗೆ ಬಾಲಿವುಡ್‍ನ ಕೆಲವು ನಿರ್ಮಾಣ ಸಂಸ್ಥೆಗಳು ಹಾಗೂ ಸ್ಟಾರ್ ನಟರು ಎಂಬ ಆರೋಪ ನೆಟ್ಟಿಗರಿಂದ ಕೇಳಿ ಬಂದಿದೆ.

ಇದೇ ವಿಚಾರವಾಗಿ ಗಾಯಕ ಸೋನು ನಿಗಮ್ ಕೂಡ ಮಾತನಾಡಿ ಮೂಸಿಕ್ ಇಂಡಸ್ಟ್ರಿಯಲ್ಲಿ ಇಂತಹ ಸಾವು ಸಂಭವಿಸದಿರಲಿ ಎಂದು ಕೇಳಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ಬಾಲಿವುಡ್ ಖ್ಯಾತ ನಿರ್ಮಾಣಕ ಕರಣ್ ಜೋಹರ್ ಹೆಜ್ಜೆ ಇಟ್ಟಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಸುಶಾಂತ್‍ನಂತೆ ಮ್ಯೂಸಿಕ್ ಇಂಡಸ್ಟ್ರಿಯಲ್ಲೂ ಆತ್ಮಹತ್ಯೆಯ ಸುದ್ದಿ ಬರಬಹುದು: ಸೋನು ನಿಗಮ್

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಹಿನ್ನೆಲೆ ಬಾಲಿವುಡ್‍ನ ಖ್ಯಾತ ನಿರ್ಮಾಪಕ ಕರಣ್ ಜೋಹರ್, ನಟ ಸಲ್ಮಾನ್ ಖಾನ್, ನಟಿ ಅಲಿಯಾ ಭಟ್, ಸೋನಂ ಕಪೂರ್, ಏಕ್ತ ಕಪೂರ್ ಸೇರಿದ್ದಂತೆ ಅನೇಕರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದರೆ ಅನ್ ಫಾಲೋ ಮಾಡುವಂತೆ ಕೆಲ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ

ಕರಣ್ ಜೋಹರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಾಕಷ್ಟು ನಾಯಕರು, ಕಲಾವಿದರನ್ನು ಫಾಲೋ ಮಾಡುತ್ತಿದ್ದರು. ಆದರೆ ಈಗ 8 ಮಂದಿ ಸೆಲೆಬ್ರಿಟಿಗಳನ್ನು ಹೊರತುಪಡೆಸಿ ಉಳಿದೆಲ್ಲರನ್ನು ಅನ್ ಫಾಲೋ ಮಾಡಿದ್ದಾರೆ. ಸದ್ಯ ಅವರು ಹಿರಿಯ ನಟ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮ ಪ್ರೊಡಕ್ಷನ್ ಸೇರಿದಂತೆ ಕೇವಲ 8 ಮಂದಿಯನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಟಿ ಅಲಿಯಾ ಭಟ್ ಮತ್ತು ಕರಣ್ ಜೋಹರ್ ಇಬ್ಬರು ಸೇರಿ ಸುಶಾಂತ್ ಸಿಂಗ್ ಅವರನ್ನು ಅಪಹಾಸ್ಯ ಮಾಡಿದ್ದರು. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *