ಮುಂಬೈ: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಪ್ರೀತಿಯ ಶ್ವಾನ ಮಾಲೀಕನಿಗಾಗಿ ಕಾದು ಕಾದು ಮಂಕಾಗಿದೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರು ಮುಂಬೈನ ಬಾಂದ್ರಾ ಮನೆಯಲ್ಲಿ ಜೂನ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಘಟನೆಯ ನಂತರ ಸುಶಾಂತ್ ಅವರ ಸಾಕು ಶ್ವಾನ ‘ಫಡ್ಜ್’ ಆಘಾತಕ್ಕೆ ಒಳಗಾಗಿದೆ. ಅಷ್ಟೇ ಅಲ್ಲದೆ ಮಾಲೀಕನಿಗಾಗಿ ಇಡೀ ಮನೆಯನ್ನು ಹುಡುಕಾಡಿದೆ, ಆಹಾರ ತ್ಯಜಿಸಿ ಸುಶಾಂತ್ ಬರುವಿಕೆಗಾಗಿ ಕಾಯುತ್ತಿದೆ.
His doggo trynaa find him💔#SushantSinghRajput pic.twitter.com/mSv4OqVICG
— gia (@surmayiakhiyan) June 17, 2020
ಹಾಸಿಗೆಯ ಮೇಲೆ ಮಲಗಿದ ಫಡ್ಜ್ ಬಾಗಿಲಿನ ಶಬ್ದವಾಗುತ್ತಿದ್ದಂತೆ ಅತ್ತ ಓಡಿ ಬರುತ್ತಿದೆ. ಹೀಗಿ ಮತ್ತೆ ಮತ್ತೆ ಬಾಗಿಲ ಬಳಿ ಬಂದು ನಿರಾಶೆಯಿಂದ ಹಿಂತಿರುಗುತ್ತಿದೆ. ಜೊತೆಗೆ ಮೊಬೈಲ್‍ನಲ್ಲಿ ಸುಶಾಂತ್ ಅವರ ಫೋಟೋವನ್ನು ನೋಡುತ್ತಾ ಕುಳಿತುಕೊಳ್ಳುತ್ತಿದೆ. ಇದರ ಕೆಲ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮರುಕ ವ್ಯಕ್ತಪಡಿಸಿದ್ದಾರೆ.
ಮರಣೋತ್ತರ ವರದಿಯ ಪ್ರಕಾರ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆದಾಗ್ಯೂ ನಟ ಯಾವುದೇ ಆತ್ಮಹತ್ಯೆಯ ಕಾರಣಗಳ ಹಾಗೂ ಸುಳಿವನ್ನು ನೀಡಿಲ್ಲ. ಅಷ್ಟೇ ಅಲ್ಲದೆ ಅನೇಕರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ದೂರಿದ್ದಾರೆ. ಹೀಗಾಗಿ ಪ್ರಕರಣದ ಕುರಿತು ಪೊಲೀಸ್ ತನಿಖೆ ನಡೆಸಿದ್ದಾರೆ.
https://www.instagram.com/p/CBk_805ns7a/?igshid=1chcheuvf2uop

Leave a Reply