-ಸೋಂಕಿತರ ಸಂಖ್ಯೆ 7123ಕ್ಕೇರಿಕೆ
ಬೆಂಗಳೂರು: ಇಂದು ಸಹ 213 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 7,213ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇವತ್ತು 35 ಮಂದಿಗೆ ಸೋಂಕು ತಗುಲಿದ್ದು, ಕೊರೊನಾ ಹೆಮ್ಮಾರಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿ ಶಿವಮೊಗ್ಗಕ್ಕೆ ತೆರಳಿದ್ದ ಕಾನ್‍ಸ್ಟೇಬಲ್ ಗೆ ಸೋಂಕು ತಗುಲಿರೋದು ಖಚಿತವಾಗಿದೆ.

ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನ್ ಪ್ರಕಾರ, ಕಲಬುರಗಿ 48, ಬೆಂಗಳೂರು ನಗರ 35, ಧಾರವಾಡ 34, ದಕ್ಷಿಣ ಕನ್ನಡ 23, ರಾಯಚೂರು 18, ಯಾದಗಿರಿ 13, ಬೀದರ್ 11, ಬಳ್ಳಾರಿ 10, ಕೊಪ್ಪಳ 4, ವಿಜಯಪುರ 3, ಬಾಗಲಕೋಟೆ 3, ಶಿವಮೊಗ್ಗ 3, ಉಡುಪಿ 2, ಹಾವೇರಿ 2, ರಾಮನಗರ 2, ಹಾಸನ 1 ಮತ್ತು ದಾವಣಗೆರೆಯಲ್ಲಿ 1 ಪ್ರಕರಣ ಬೆಳಕಿಗೆ ಬಂದಿದೆ.

ಇಂದು ಪತ್ತೆಯಾದ 213 ಪ್ರಕರಣಗಳ ಪೈಕಿ 103 ಮಂದಿ ಅಂತರಾಜ್ಯ ಹಾಗೂ 23 ಮಂದಿಗೆ ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು 180 ಜನರು ಕೊರೊನಾದಿಂದ ಗುಣಮುಖರಾಗಿ ಕೋವಿಡ್ 19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 7213 ಪ್ರಕರಣಗಳಲ್ಲಿ ರಾಜ್ಯದಲ್ಲಿ 2987 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 4135 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು ಕೊರೊನಾ ತನ್ನ ಮರಣ ಕೇಕೆಯನ್ನು ಮುಂದುವರಿಸಿದ್ದು ಇಬ್ಬರು ಸಾವನ್ನಪ್ಪಿರೋದನ್ನು ಆರೋಗ್ಯ ಇಲಾಖೆ ಖಚಿತಪಡಿಸಿದೆ.
ಸಂಜೆಯ ಪತ್ರಿಕಾ ಪ್ರಕಟಣೆ 15/06/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.https://t.co/chNB86P8Qc@BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/pFvja9Ta8O— Karnataka Health Department (@DHFWKA) June 15, 2020
ಇಬ್ಬರ ಸಾವು:
1. ರೋಗಿ 7060: ಧಾರವಾಡದ 65 ವರ್ಷದ ವೃದ್ಧ ರೋಗಿ-6222ರ ಜೊತೆ ಸಂಪರ್ಕ ಹೊಂದಿದ್ದರು. ಜೂನ್ 14ರಂದು ದಾಖಲಾಗಿದ್ದ ವೃದ್ಧ ಅಂದೇ ನಿಧನರಾಗಿದ್ದಾರೆ.
2. ರೋಗಿ 7185: ಬೆಂಗಳೂರಿನ 75 ವರ್ಷದ ವೃದ್ಧೆ. ಜ್ವರದ ಲಕ್ಷಣಗಳ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 13ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 15ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Leave a Reply