ಯಾದಗಿರಿಯ 69 ವರ್ಷದ ಮಹಿಳೆಯ ಸಾವಿನ ರಹಸ್ಯ ಕೊರೊನಾ

ಯಾದಗಿರಿ: ಈ ತಿಂಗಳ 20 ರಂದು ಮಹಾರಾಷ್ಟ್ರದಿಂದ ಯಾದಗಿರಿಗೆ ಬರುವಾಗ ಮಾರ್ಗ ಮಧ್ಯೆ ಸಾವನಪ್ಪಿದ್ದ 69 ವರ್ಷದ ಮಹಿಳೆ ಸಾವು ಕೊರೊನಾದಿಂದ ಎಂಬುವುದು ಇಂದು ದೃಢಪಟ್ಟಿದೆ.

ಮಹಿಳೆಯ ಶವವನ್ನು ಕುಟುಂಬಸ್ಥರು ಯಾದಗಿರಿಗೆ ತರುತ್ತಿದ್ದರು. ಯರಗೋಳ ಚೆಕ್‍ಪೋಸ್ಟ್ ವಾಹನವನ್ನು ತಡೆದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಶವವನ್ನು ಮೃತದೇಹವನ್ನು ಕೋವಿಡ್-19 ಆಸ್ಪತ್ರೆಗೆ ರವಾನಿಸಿದ್ದರು. ಮೃಹದೇಹದ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಬಳಿಕ ಕೋವಿಡ್-19 ನಿಯಮಾವಳಿ ಅನುಗುಣವಾಗಿ ಅಂತ್ಯ ಸಂಸ್ಕಾರ ನಡೆಸಲಾಗಿತ್ತು.

ಇಂದು ಬಂದ ವರದಿಯಲ್ಲಿ ಸಾವನ್ನಪ್ಪಿದ ಮಹಿಳೆಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದೆ. ಜಿಲ್ಲೆಯಲ್ಲಿ ಕೊರೊನಾಗೆ ಸಂಬಂಧಿಸಿದ ಮೊದಲ ಸಾವು ಇದಾಗಿದೆ. ಇಂದು ಒಟ್ಟು 16 ಪ್ರಕರಣಗಳು ಬೆಳಕಿಗೆ ಬಂದಿದ್ದು, ಜಿಲ್ಲೆಯ ಸಕ್ರಿಯ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ.

Comments

Leave a Reply

Your email address will not be published. Required fields are marked *