ವಿಜಯಪುರದಲ್ಲಿ ಗರಿಷ್ಠ 45.3 ಡಿಗ್ರಿ ಉಷ್ಣಾಂಶ ದಾಖಲು

– ಇತಿಹಾಸದಲ್ಲೇ ಅತಿ ಹೆಚ್ಚು ತಾಪಮಾನ

ವಿಜಯಪುರ: ಗುಮ್ಮಟಗಳ ಜಿಲ್ಲೆ ವಿಜಯಪುರ ಜನರಲ್ಲಿ ಒಂದು ಕಡೆ ಕೊರೊನಾ ಭೀತಿ ಎದುರಾಗಿದ್ದರೆ, ಇನ್ನೊಂದೆಡೆ ಭಯಾನಕ ಬಿಸಿಲಿನಿಂದ ಆತಂಕ ಶುರುವಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಇತಿಹಾಸದಲ್ಲಿಯೇ ಅತಿ ಹೆಚ್ಚು ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ತಾಪಮಾನ ವಿಜಯಪುರ ಜಿ. ಆಲಮೇಲ ಪಟ್ಟಣದಲ್ಲಿ ದಾಖಲಾಗಿದೆ.

ಗರಿಷ್ಠ 45.3 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಈ ತಾಪಮಾನ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವರದಿಯಲ್ಲಿ ಬಹಿರಂಗಪಡಿಸಿದೆ. ಒಟ್ಟಿನಲ್ಲಿ ಈ ಭಯಾನಕ ಬಿಸಿಲು ರಾಜಸ್ತಾನದ ಮರುಭೂಮಿ ಯನ್ನ ನೆನಪಿಸುತ್ತಿದೆ.

Comments

Leave a Reply

Your email address will not be published. Required fields are marked *