ದೀಪಿಕಾರಿಂದ ಮಾವಿನ ಕಾಯಿ ಫೋಟೋ ಪೋಸ್ಟ್ – ಗರ್ಭಿಣಿನಾ ಎಂದು ಫ್ಯಾನ್ಸ್ ಪ್ರಶ್ನೆ

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅಪ್ಲೋಡ್ ಮಾಡಿರುವ ಫೋಟೋ ನೋಡಿ ಅಭಿಮಾನಿಗಳು ನೀವು ಗರ್ಭಿಣಿನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ನಟ ರಣ್‍ವೀರ್ ಸಿಂಗ್ ಮದುವೆ ಆದ ಕೆಲವು ದಿನಗಳ ನಂತರ ದೀಪಿಕಾ ಗರ್ಭಿಣಿ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವದಂತಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ದೀಪಿಕಾ ಕೂಡ ಸ್ಪಷ್ಟಪಡಿಸಿದ್ದರು. ಆದರೆ ಇದೀಗ ಲಾಕ್‍ಡೌನ್ ಸಮಯದಲ್ಲಿ ದೀಪಿಕಾ ಸಿಹಿ ಸುದ್ದಿ ನೀಡಿದ್ದಾರ ಎಂಬ ಅನುಮಾನ ಮೂಡಿದೆ. ಯಾಕೆಂದರೆ ದೀಪಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಫೋಟೋ ನೋಡಿ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ದೀಪಿಕಾ ಕಟ್ ಮಾಡಿರುವ ಮಾವಿನ ಕಾಯಿ ಪೀಸ್‍ಗಳನ್ನು ಒಂದು ಪ್ಲೇಟಿನಲ್ಲಿ ಹಾಕಿದ್ದಾರೆ. ಅದಕ್ಕೆ ಉಪ್ಪು, ಖಾರ ಹಾಕಿದ್ದು, ಆ ಫೋಟೋವನ್ನು ಶೇರ್ ಮಾಡಿದ್ದಾರೆ. ದೀಪಿಕಾ ಈ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ನೀವು ಗರ್ಭಿಣಿಯೇ?, ಏನಾದರು ಒಳ್ಳೆಯ ಸುದ್ದಿ ಇದಿಯಾ? ಎಂದು ಕಮೆಂಟ್ ಮಾಡುವ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಗರ್ಭಿಣಿಯಾದವರು ಮಾವಿನ ಕಾಯಿ ತಿಂದು ಬಯಕೆ ಈಡೇರಿಸಿಕೊಳ್ಳುತ್ತಾರೆ. ಈಗ ದೀಪಿಕಾ ಕೂಡ ಮಾವಿನ ಕಾಯಿ ಫೋಟೋ ಪೋಸ್ಟ್ ಮಾಡಿರುವುದರಿಂದ ದೀಪಿಕಾ ಸಹ ಮಾವಿನ ಕಾಯಿ ತಿಂದು ಬಯಕೆ ಈಡೇರಿಕೊಳ್ಳುತ್ತಿದ್ದಾರಾ ಎಂದು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ. ಆದರೆ ದೀಪಿಕಾ ಮಾತ್ರ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿಲ್ಲ.

ಇತ್ತೀಚೆಗೆ ದೀಪಿಕಾ ಲಾಕ್‍ಡೌನ್ ಸಮಯದಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ನೆನೆದು ಪೋಸ್ಟ್ ಮಾಡಿದ್ದರು. ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬಾಲ್ಯದ ಫೋಟೋಗಳನ್ನು ದೀಪಿಕಾ ಹಂಚಿಕೊಂಡಿದ್ದರು. ಅದಕ್ಕೆ ‘ಬಾಲ್ಯದಲ್ಲೇ ಆರಂಭಿಸಿದ್ದೆ’ ಎಂದು ಕ್ಯಾಪ್ಷನ್ ಹಾಕಿ ಸ್ಟೇಜ್ ಮೇಲೆ ಕ್ಯೂಟ್ ಪೋಸ್ ಕೊಡುತ್ತಾ ನಿಂತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಹಾಗೆಯೇ ಇನ್ನೊಂದು ಪೋಸ್ಟ್ ನಲ್ಲಿ ಸ್ನೇಹಿತರ ಜೊತೆ ಆಟವಾಡುತ್ತಾ, ಪರಾಟ ತಿನ್ನುತ್ತಿರುವ ಬಾಲ್ಯದ ಫೋಟೋವನ್ನು ಹಂಚಿಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದರು.

ಬಾಲಿವುಡ್‍ನ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್‍ವೀರ್ ಸಿಂಗ್ 2018ರ ನವೆಂಬರ್ 14 ಮತ್ತು 15ರಂದು ಇಟಲಿಯ ಕೊಮೊ ಸಿಟಿಯಲ್ಲಿ ಮದುವೆಯಾಗಿದ್ದರು. ನವೆಂಬರ್ 14ರಂದು ಕೊಂಕಣಿ ಹಾಗೂ ನವೆಂಬರ್ 15ರಂದು ಸಿಂಧ್ ಸಂಪ್ರದಾಯದಲ್ಲಿ ದೀಪ್‍ವೀರ್ ವಿವಾಹವಾಗಿದ್ದರು.

https://www.instagram.com/p/B_t33A_DmF9/?igshid=1wax1sbopplwg

Comments

Leave a Reply

Your email address will not be published. Required fields are marked *