ಭಾರತೀಯರು ವಾರಕ್ಕೆ 60 ಗಂಟೆಗೆ ಕೆಲ್ಸ ಮಾಡೋ ಪ್ರತಿಜ್ಞೆ ಮಾಡ್ಬೇಕು : ನಾರಾಯಣ ಮೂರ್ತಿ

ಬೆಂಗಳೂರು: ಲಾಕ್‍ಡೌನ್‍ನಿಂದ ಆಗಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ವಾರಕ್ಕೆ 60 ಗಂಟೆಗಳ ಕಾಲ ಭಾರತೀಯರು ದುಡಿಯುವ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.

ವಾಹಿನಿಗೆ ಸಂದರ್ಶನ ನೀಡಿದ ಅವರು, ಮುಂದೆ ಭಾರತ ವೇಗವಾಗಿ ಅಭಿವೃದ್ಧಿ ಹೊಂದಬೇಕಾದರೆ ವಾರದ 6 ದಿನ 10 ಗಂಟೆಗಳ ಕಾಲ ಕೆಲಸ ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕು. ವಾರದಲ್ಲಿ 40 ಗಂಟೆ ಕೆಲಸ ಮಾಡದೇ 60 ಗಂಟೆಗೆ ಕೆಲಸದ ಅವಧಿ ಏರಿಸಿದರೆ ದೇಶ ವೇಗವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಪೋರೇಟ್ ಮತ್ತು ಉದ್ಯಮಗಳು ಹೆಚ್ಚು ಶಿಫ್ಟ್ ಗಳನ್ನು ಅಳವಡಿಸಿಕೊಳ್ಳಬೇಕು. ಉದ್ಯೋಗ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ಯಾಕೆಂದರೆ ಮುಂದಿನ 12-18 ತಿಂಗಳ ಕಾಲ ಕೊರೊನಾ ವೈರಸ್ ಇರಲಿದೆ ಎಂದು ಹೇಳಿದರು.

ಭಾರತದ ಟೆಸ್ಟಿಂಗ್ ಸಾಮರ್ಥ್ಯದ ಬಗ್ಗೆ ಪ್ರತಿಕ್ರಿಯಿಸಿ, ಈಗ ಪ್ರತಿ ದಿನ 1 ಲಕ್ಷ ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದರೆ ಎಲ್ಲ ಜನರನ್ನು ಪರೀಕ್ಷೆ ಮಾಡಲು 37 ವರ್ಷ ಬೇಕಾಗಬಹುದು. ಭಾರತಲ್ಲಿ ಕೊರೊನಾವೈರಸ್ ಸೋಂಕಿನಿಂದ ಸಾವಿಗೀಡಾಗುವುದಕ್ಕಿಂತ ಹೆಚ್ಚು ಮಂದಿ ಹಸಿವಿನಿಂದ ಸಾಯುತ್ತಾರೆ ಎಂದು ಎನ್.ಆರ್ ನಾರಾಯಣ ಮೂರ್ತಿ ತಿಳಿಸಿದರು.

Comments

Leave a Reply

Your email address will not be published. Required fields are marked *