ರಾಕಿಂಗ್ ದಂಪತಿಯ ಕ್ಯೂಟ್ ಫ್ಯಾಮಿಲಿ ಫೋಟೋ ವೈರಲ್

ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಕಪಲ್ ಮನೆಗೆ ಜೂನಿಯರ್ ಯಶ್ ಆಗಮಿಸಿ ಆರು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಜೂನಿಯರ್ ರಾಜಾಹುಲಿಯ ದರ್ಶನ ಮಾಡಿಸಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ರಾಕಿಂಗ್ ದಂಪತಿಯ ಕುಟುಂಬದ ಫೋಟೋ ವೈರಲ್ ಆಗುತ್ತಿದೆ.

ಯಶ್, ರಾಧಿಕಾ ಪಂಡಿತ್, ಐರಾ ಮತ್ತು ಜೂನಿಯರ್ ಯಶ್ ನಾಲ್ವರು ಒಟ್ಟಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ಅಭಿಮಾನಿಗಳು ಇನ್‍ಸ್ಟಾಗ್ರಾಂ, ಫೇಸ್‍ಬುಕ್ ಮತ್ತು ಟ್ವಿಟ್ಟರಿನಲ್ಲಿ ಶೇರ್ ಮಾಡುತ್ತಿದ್ದಾರೆ. ಫೋಟೋದಲ್ಲಿ ಎಲ್ಲರೂ ಬ್ಲಾಕ್ ಆ್ಯಂಡ್ ವೈಟ್ ಕಾಂಬಿನೇಷನ್‍ನಲ್ಲಿ ಉಡುಪು ಧರಿಸಿದ್ದು, ರಾಧಿಕಾ ಅವರು ತಮ್ಮ ಮುದ್ದು ಮಗನನ್ನು ಎತ್ತಿಕೊಂಡಿದ್ದಾರೆ. ಇನ್ನೂ ಯಶ್ ಒಂದು ಕೈಯಲ್ಲಿ ಮಗಳನ್ನು ಎತ್ತಿಕೊಂಡಿದ್ದು, ಇನ್ನೊಂದು ಕೈಯಲ್ಲಿ ರಾಧಿಕಾರನ್ನು ಅಪ್ಪಿಕೊಂಡಿದ್ದಾರೆ. ರಾಕಿಂಗ್ ದಂಪತಿಯ ಕುಟುಂಬದ ಫೋಟೋ ತುಂಬಾ ಕ್ಯೂಟಾಗಿದೆ.

https://www.instagram.com/p/B_mjSb9AJTb/?utm_source=ig_embed

ಕಳೆದ ದಿನವೇ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮೊದಲ ಬಾರಿಗೆ ತಮ್ಮ ಪುತ್ರನ ಫೋಟೋವನ್ನು ರಿವೀಲ್ ಮಾಡಿದ್ದಾರೆ. ರಾಧಿಕಾ ಅವರು ಆ ಫೋಟೋಗೆ, “ಇವನೇ ನಮ್ಮ ಕುಟುಂಬದ ಕಾಮನಬಿಲ್ಲು, ಅಮ್ಮನ ಮುದ್ದಿನ ಮಗ. ನಮ್ಮ ಜ್ಯೂನಿಯರ್ ಯಶ್‍ಗೆ ನಿಮ್ಮಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು” ಎಂದು ಬರೆದುಕೊಂಡಿದ್ದರು.

ಯಶ್ ಕೂಡ ಇದೇ ಫೋಟೋವನ್ನು ಅಪ್ಲೋಡ್ ಮಾಡಿದ್ದು, “ನಿಮ್ಮ ಪ್ರೀತಿ, ಆಶೀರ್ವಾದ, ಹಾರೈಕೆ ಸದಾ ಈ ನನ್ನ ಪುಟ್ಟ ಕಂದನ ಮೇಲಿರಲಿ” ಎಂದು ಪ್ರೀತಿಯಿಂದ ಹೇಳಿದ್ದರು. ಯಶ್ ಮತ್ತು ರಾಧಿಕಾ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಯಶ್ ದಂಪತಿ ಮಕ್ಕಳ ಫೋಟೋವನ್ನು ರಿವೀಲ್ ಮಾಡಲು ಬಹಳ ಚ್ಯೂಸಿಯಾಗಿರುತ್ತಾರೆ. ಈ ಹಿಂದೆ ಮಗಳ ಫೋಟೋವನ್ನು ಕೂಡ ಬಹಳ ದಿನಗಳ ಬಳಿಕ ರಿವೀಲ್ ಮಾಡಿದ್ದರು. ಇದೇ ರೀತಿ ಜೂನಿಯರ್ ಫೋಟೋ ಕೂಡ ರಿವೀಲ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *