ಇಂದು 9 ಮಂದಿಗೆ ಕೊರೊನಾ- 11 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು: ಇಂದು 9 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದು, ಓರ್ವ ರೋಗಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 512ಕ್ಕೆ ಏರಿದ್ದು, ಸಾವಿನ ಸಂಖ್ಯೆ 19ಕ್ಕೆ ತಲುಪಿದೆ. ಇದುವರೆಗೂ ಕೊರೊನಾದಿಂದ 193 ಮಂದಿ ಗುಣಮುಖರಾಗಿದ್ದಾರೆ. ಇಂದು ಒಟ್ಟು 11 ಮಂದಿ ಆಸತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ರಾಜ್ಯದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಮಂಡ್ಯ 2, ದಕ್ಷಿಣ ಕನ್ನಡ 2, ವಿಜಯಪುರ 2, ಬಾಗಲಕೋಟೆ 2, ಬೆಂಗಳೂರು 1 ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ.

ಸೋಂಕಿತರ ವಿವರ:
ರೋಗಿ-504: ಬೆಂಗಳೂರಿನ ಪಾದರಾಯಪುರದ 13 ವರ್ಷದ ಬಾಲಕ, ಅನಾರೋಗ್ಯದಿಂದ ಬಳಲುತ್ತಿದ್ದ.
ರೋಗಿ-505: ಮಂಡ್ಯ ಜಿಲ್ಲೆಯ ನಾಗಮಂಗಲದ 50 ವರ್ಷದ ಪುರುಷ, ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ಹಿನ್ನೆಲೆ
ರೋಗಿ-506: ದಕ್ಷಿಣ ಕನ್ನಡದ 45 ವರ್ಷದ ಪುರುಷ, ರೋಗಿ-432 ಜೊತೆ ಸಂಪರ್ಕ.
ರೋಗಿ-507: ದಕ್ಷಿಣ ಕನ್ನಡದ 80 ವರ್ಷದ ವೃದ್ಧೆ, ರೋಗಿ-432 ಜೊತೆ ಸಂಪರ್ಕ.
ರೋಗಿ-508: ಬಾಗಲಕೋಟೆ ಜಮಖಂಡಿಯ 32 ವರ್ಷದ ಮಹಿಳೆ, ರೋಗಿ-456 ಜೊತೆ ಸಂಪರ್ಕ.
ರೋಗಿ-509: ಬಾಗಲಕೋಟೆ ಜಮಖಂಡಿಯ 21 ವರ್ಷದ ಯುವತಿ, ರೋಗಿ-456 ಜೊತೆ ಸಂಪರ್ಕ.
ರೋಗಿ-510: ವಿಜಯಪುರದ 45 ವರ್ಷದ ಪುರುಷ, ರೋಗಿ-221 ಜೊತೆ ಸಂಪರ್ಕ.
ರೋಗಿ-511: ವಿಜಯಪುರದ 27 ವರ್ಷದ ಯುವಕ, ಸೋಂಕು ಹೇಗೆ ತಗುಲಿತು ಎಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.
ರೋಗಿ-512: ಮಂಡ್ಯ ಜಿಲ್ಲೆಯ ಮಳವಳ್ಳಿ 22 ವರ್ಷದ ಯುವತಿ, ರೋಗಿ-371ರ ಜೊತೆ ಸಂಪರ್ಕ

ಬೆಂಗಳೂರು ನಗರದ 50 ವರ್ಷದ ಪುರುಷ(ರೋಗಿ-466) ಇಂದು ಸಾವನ್ನಪ್ಪಿದ್ದಾರೆ. ಈ ರೋಗಿ ಏಪ್ರಿಲ್ 24ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ನ್ಯೂಮೋನಿಯಾ, ಅಧಿಕ ರಕ್ತದೊತ್ತಡ, ಎಚ್‍ಸಿವಿ ಪಾಸಿಟಿವ್ ಹಾಗೂ ಕಿಡ್ನಿ ಸಮಸ್ಯೆ ಇತ್ತು. ಇವರು ಇಂದು ಆಸ್ಪತ್ರೆಯ ತುರ್ತು ನಿರ್ಗಮನದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *