ಆನ್‍ಲೈನ್ ಆಟದಲ್ಲಿ ಸೋಲಿಸಿದ್ದಕ್ಕೆ ಪತ್ನಿಯ ಬೆನ್ನು ಹುರಿ ಮುರಿದ!

ಗಾಂಧಿನಗರ: ಆನ್ ಲೈನ್ ಲೂಡೋ ಆಟದಲ್ಲಿ ನಿರಂತರವಾಗಿ ಪತ್ನಿ ಸೋಲಿಸಿದ್ದರಿಂದ ಸಿಟ್ಟುಗೊಂಡ ಪತಿರಾಯ ಆಕೆಯನ್ನು ಚೆನ್ನಾಘಿ ಥಳಿಸಿದ ಘಟನೆ ಗುಜರಾತಿನ ವಡೋದರಾದಲ್ಲಿ ನಡೆದಿದೆ.

ಪತ್ನಿ ಟ್ಯೂಷನ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ದಂಪತಿ ವಡೋದರಾದ ವೆಮಲಿ ಎಂಬ ಪ್ರದೇಶದಲ್ಲಿ ವಾಸವಾಗಿದ್ದರು. ಪತಿ ಥಳಿಸಿದ ಪರಿಣಾಮ ಮಹಿಳೆಯ ಬೆನ್ನು ಹುರಿಗೆ ತೀವ್ರವಾಗಿ ಪೆಟ್ಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ನಡೆದಿದ್ದೇನು..?
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಗಡೆ ಹೋಗುವಂತಿಲ್ಲ. ಹೀಗಾಗಿ ಸಮಯ ಕಳೆಯಲು ಪತಿ- ಪತ್ನಿ ಇಬ್ಬರೂ ಆನ್ ಲೈನ್ ಆಟದ ಮೊರೆ ಹೋಗಿದ್ದಾರೆ.

ಇಬ್ಬರು ಲುಡೋ ಆಟವಾಡುವ ತೀರ್ಮಾನ ಮಾಡಿದರು. ಹೀಗೆ ಇಬ್ಬರೂ ಆಟದಲ್ಲಿ ತಲ್ಲೀನರಾಗಿದ್ದು, ಪತ್ನಿ ನಿರಂತರವಾಗಿ ಪತಿಯನ್ನು ಸೋಲಿಸುತ್ತಲೇ ಬಂದಳು. ಇದರಿಂದ ತಾಳ್ಮೆ ಕಳೆದುಕೊಂಡ ಪತಿರಾಯ ಪತ್ನಿ ಜೊತೆ ಜಗಳವಾಡಿದ್ದಾನೆ. ಈ ಜಗಳ ತಾರಕಕ್ಕೇರಿ ಪತಿ ತನ್ನ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ.

ಘಟನೆಯಿಂದ ಬೆನ್ನಿಗೆ ಗಂಭೀರ ಗಾಯಗೊಂಡ ಪತ್ನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ನಂತರ ತಾನು ಗಂಡನ ಮನೆಗೆ ಹೋಗಲ್ಲ, ತಾಯಿಗೆ ಮನೆಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಮಹಿಳೆಗೆ ಕೌನ್ಸಿಲಿಂಗ್ ಕೂಡ ಮಾಡಿಸಿದ್ದು, ನಾನು ಪತಿ ಮನೆಗೆ ಹೋಗಲ್ಲ. ತಾಯಿ ಮನೆಗೆ ಹೋಗುತ್ತೇನೆ. ಆದರೆ ತಾಯಿ ಮನೆಗೆ ಹೋಗುವ ಮೊದಲು ಗಂಡನ ಮನೆಯಲ್ಲಿ ಕೆಲವೊಂದು ದಾಖಲೆಗಳು ಇವೆ. ಅವುಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾಳೆ. ನಂತರ ಇಬ್ಬರನ್ನೂ ಕೌನ್ಸಿಲಿಂಗ್ ಗೆ ಒಳಪಡಿಸಲಾಯಿತು. ಈ ವೇಳೆ ಕೌನ್ಸಿಲರ್ ಇಬ್ಬರಿಗೂ ಎರಡು ಆಯ್ಕೆಗಳನ್ನು ನೀಡಿದರು. ಅದರಲ್ಲಿ ಒಂದು ಪ್ರಕರಣ ದಾಖಲಿಸುವುದು, ಇನ್ನೊಂದು ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿದೆ.

ಹೀಗಾಗಿ ಕೊನೆಗೆ ಆರೋಪಿ ಪತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ಪತ್ನಿ ಬಳಿ ಕ್ಷಮೆ ಕೇಳಿದ್ದಾನೆ. ಹೀಗಾಗಿ ಪತಿ ವಿರುದ್ಧ ಪ್ರಕರಣ ದಾಖಲಿಸಲು ಪತ್ನಿ ಹಿಂದೇಟು ಹಾಕಿದ್ದು, ರಾಜಿ ಮೂಲಕ ಸಂಧಾನ ಐಶಸ್ವಿಯಾಗಿದೆ.

ಸದ್ಯ ಮಹಿಳೆ ತಾಯಿ ಮನೆಗೆ ತೆರಳಿದ್ದು, ಗುಣಮುಖಳಾದ ಬಳಿಕ ಗಂಡನ ಮನೆಗೆ ತೆರಳುವುದಾಗಿ ಒಪ್ಪಿಕೊಂಡಿದ್ದಾಳೆ.

Comments

Leave a Reply

Your email address will not be published. Required fields are marked *