ನೈಜ ಸೌಂದರ್ಯದತ್ತ ಮರಳ್ತಿರೋ ಬೆಂಗ್ಳೂರು

ಬೆಂಗಳೂರು: ಸಿಲಿಕಾನ್ ಸಿಟಿ ಅಂದಾಕ್ಷಣ ಇಲ್ಲಿನ ಟ್ರಾಫಿಕ್, ಹೊಗೆ ನೆನಪಾಗುತ್ತದೆ. ಅಲ್ಲದೇ ಲಾಕ್‍ಡೌನ್‍ನಿಂದಾಗಿ ಗಾರ್ಬೇಜ್ ಸಿಟಿ ಕಂಪ್ಲೀಟ್ ಆಗಿ ಗ್ರೀನ್ ಸಿಟಿಯಾಗಿದೆ. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಬೆಂಗಳೂರು ತನ್ನ ನೈಜ ಸೌಂದರ್ಯವನ್ನು ಮರಳಿ ಪಡೆಯುತ್ತಿದೆ.

ಹೌದು..ಕೊರೊನಾ ಲಾಕ್‍ಡೌನ್‍ನಿಂದಾಗಿ ಬೆಂಗಳೂರು ತನ್ನ ನೈಜ ಸೌಂದರ್ಯವನ್ನು ಮರಳಿ ಪಡೆಯುತ್ತಿದೆ. ಈಗ ವಸಂತ ಕಾಲ ಆರಂಭವಾಗುತ್ತಿದ್ದು, ನಗರದಾದ್ಯಂತ ಹಚ್ಚ ಹಸಿರು, ಬಣ್ಣ ಬಣ್ಣದ ಹೂವುಗಳು ಅರಳಿನಿಂತಿವೆ.

ನಗರದ ಎಂಜಿ ರೋಡ್, ಬ್ರಿಗೇಡ್ ರೋಡ್, ಮಹಲ್ ರೋಡ್, ಮಲ್ಲೇಶ್ವರಂ, ವಿಧಾನಸೌಧ ರೋಡ್‍ಗಳಲ್ಲಿ ಮರದಿಂದ ಬಿದ್ದ ಕೆಂಪು ಮತ್ತು ಕೆನ್ನೇರಳೆ ಬಣ್ಣದ ಹೂವುಗಳು ಹೂವಿನ ಹಾಸಿಗೆ ಹೊದಿಸಿವೆ ಎಂದು ಲಾಲ್‍ಬಾಗ್ ಉಪನಿರ್ದೇಶಕರು ಚಂದ್ರಶೇಖರ್  ಹೇಳಿದ್ದಾರೆ.

ಇನ್ನೂ ನಗರದ ಮುಕುಟಮಣಿ ಲಾಲ್‍ಬಾಗ್ ಮತ್ತಷ್ಟು ಹಸಿರು ತೊಟ್ಟು, ಸುಮ ರಾಣಿಯರ ನಡುವೆ ಕಂಗೊಳಿಸುತ್ತಿದೆ. ಹಾಗೆಯೇ ಕಬ್ಬನ್ ಪಾರ್ಕ್ ಸಹ ಕಣ್ಣೋಟ್ಟದಲ್ಲೇ ಸೆಳೆಯುತ್ತಿದೆ. ಇನ್ನೂ ಸ್ಯಾಂಕಿ ಕೆರೆಗೆ ಸರಿಸಾಟಿಯೆಂಬಂತೆ ಬೆಡಗು-ಭಿನ್ನಾಣದಂತೆ ಮೈತುಂಬಿಕೊಂಡಿದೆ. ಅದರಂತೆ ಕೆಲ ಫ್ಲೈ ಓವರ್ ಗಳು ನೋಡುಗರನ್ನು ಕಳೆದೋಗುವಂತೆ ಮಾಡಿವೆ.

ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಇತ್ತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ನಡುವೆ ಬಣ್ಣ ಬಣ್ಣದ ಹೂಗಳು ಮೆಟ್ರೋ ಮಂದಿಯಲ್ಲಿ ಮಂದಹಾಸ ಮೂಡಿಸಿವೆ.

Comments

Leave a Reply

Your email address will not be published. Required fields are marked *