ಕೊರೊನಾ ಎಫೆಕ್ಟ್- ಬಾಲ್ಕನಿಯಲ್ಲಿ ನಿಂತೇ ಎಣ್ಣೆ ಪಾರ್ಟಿ

ರೋಮ್: ಕೆಲವರು ಬಾಲ್ಕನಿಯಲ್ಲಿಯೇ ನಿಂತು ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕೊರೊನಾದಿಂದ ಮನೆಯಲ್ಲಿ ಕುಳಿತಿರುವ ಜನರು ಟೈಂಪಾಸ್ ಗಾಗಿ ಹೊಸ ಮಾರ್ಗಗಳನ್ನು ಕಂಡು ಹಿಡಿದಿಕೊಳ್ಳುತ್ತಿದ್ದಾರೆ. ಕೊರೊನಾದಿಂದ ಒಟ್ಟಾಗಿ ಸೇರಿ ಪಾರ್ಟಿ ಮಾಡೋದು ಅಪಾಯ. ಹಾಗಾಗಿ ಇಟಲಿಯ ಕೆಲ ಜನರು ತಮ್ಮ ಮನೆಯ ಬಾಲ್ಕನಿಗಳಲ್ಲಿ ನಿಂತು ನೆರೆಹೊರೆಯವರು ಸಖತ್ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

ವೈರಲ್ ವಿಡಿಯೋ: ಪಾರ್ಟಿ ಎಂದ್ರೆ ಎಲ್ಲರೂ ಗ್ಲಾಸ್ ಹಿಡಿದು ಚೀಯರ್ಸ್ ಅಂದಾಗಲೇ ಒಂದು ರೀತಿಯ ಖುಷಿ ಇರುತ್ತೆ. ಅಕ್ಕಪಕ್ಕದ ಕಟ್ಟಡಗಳಲ್ಲಿ ಇವರು ಇರೋದರಿಂದ ವೈನ್ ತುಂಬಿದ ಗ್ಲಾಸ್ ಗಳಿಗೆ ಉದ್ದನೆಯ ಬಂಬೂ ಕಟ್ಟಿದ್ದಾರೆ. ಈ ಬಂಬೂಗಳ ಮೂಲಕ ಗ್ಲಾಸ್ ಮುಂದೆ ತಂದು ಎಲ್ಲರೂ ಚೀಯರ್ಸ್ ಮಾಡಿ ಪಾರ್ಟಿ ಎಂಜಾಯ್ ಮಾಡಿರೋದನ್ನು ವಿಡಿಯೋದಲ್ಲಿ ಕಾಣಬಹುದು.

ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‍ಡೌನ್ ಅಸ್ತ್ರವನ್ನು ಬಳಸಿವೆ. ಕೊರೊನಾ ತಡೆಯಲು ಜನರು ಮನೆಯಿಂದ ಹೊರ ಬರದಂತೆ ಸರ್ಕಾರಗಳು ಮನವಿ ಮಾಡಿಕೊಂಡಿವೆ. ಅಗತ್ಯ ವಸ್ತುಗಳಿಗೆ ಮನೆಯಿಂದ ಹೊರ ಬಂದ್ರು ಮಾಸ್ಕ್ ಕಡ್ಡಾಯ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಿವೆ. ಕೊರೊನಾ ಆತಂಕದಿಂದ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *