ಅವಲಕ್ಕಿಯಿಂದ ಹೊಸ ತಿಂಡಿ ಮಾಡೋ ವಿಧಾನ

ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ದಿನಪೂರ್ತಿ ಮನೆಯಲ್ಲಿಯೇ ಇರಬೇಕು. ಬೇಸರವಾದಾಗ ಹೊರಗೆ ಹೋಗಿ ಏನಾದರೂ ತಿಂದುಕೊಂಡು ಬರೋಣ ಎಂದರೂ ಆಗುವುದಿಲ್ಲ. ಆದ್ದರಿಂದ ನಿಮಗಾಗಿ ಅವಲಕ್ಕಿಯಿಂದ ಹೊಸ ರೀತಿಯ ತಿಂಡಿ ಮಾಡುವ ವಿಧಾನ ಇಲ್ಲಿದೆ…

ಬೇಕಾಗುವ ಸಾಮಾಗ್ರಿಗಳು
1. ದಪ್ಪ ಅವಲಕ್ಕಿ – 3 ಕಪ್
2. ಚಿರೋಟಿ ರವೆ- 1 ಕಪ್ (ಚಿರೋಟಿ ರವೆ ಬದಲಾಗಿ ಅಕ್ಕಿ ರವೆ ಸಹ ಬಳಸಬಹುದು)
3. ಮೊಸರು – 1/4 ಕಪ್
4. ಖಾರದ ಪುಡಿ – 1/2 ಚಮಚ
5. ಗರಂ ಮಸಾಲ- 1/2 ಚಮಚ
6. ಜೀರಿಗೆ ಪೌಡರ್ – ಸ್ಪಲ್ಪ
7. ಮೆಣಸಿನಕಾಯಿ – ಎರಡು
8. ಈರುಳ್ಳಿ – 1
9. ಕೋತಂಬರಿ ಸೊಪ್ಪು – ಸ್ವಲ್ಪ
10. ಅರಿಶಿಣ – ಚಿಟಿಕೆ
11. ಆಲೂಗಡ್ಡೆ – 1
12. ಎಣ್ಣೆ
13. ಉಪ್ಪು – ರುಚಿಗೆ ತಕ್ಕಷ್ಟು
14. ನಿಂಬೆ ಹಣ್ಣು – 1

ಮಾಡುವ ವಿಧಾನ
* ಮೊದಲಿಗೆ ಅವಲಕ್ಕಿಯನ್ನು ನೀರಿನಲ್ಲಿ 5 ನಿಮಿಷ ನೆನೆಯಲು ಬಿಡಬೇಕು. ನಂತರ ಅವಲಕ್ಕಿಯಲ್ಲಿ ನೀರು ಹೋಗುವಂತೆ ಹಿಂಡಿ ಮಿಕ್ಸಿಂಗ್ ಬೌಲ್‍ಗೆ ಹಾಕಿಕೊಳ್ಳಿ.
* ಎರಡು ಮೆಣಸಿನಕಾಯಿ, ಈರುಳ್ಳಿ ಮತ್ತು ಕೋತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
* ಈ ಮಿಕ್ಸಿಂಗ್ ಬೌಲ್‍ಗೆ 1 ಕಪ್ ಚಿರೋಟಿ ರವೆ, ಮೊಸರು, ಖಾರದ ಪುಡಿ, ಉಪ್ಪು, ಗರಂ ಮಸಾಲ, ಉಪ್ಪು, ಜೀರಿಗೆ ಪೌಡರ್, ಅರಿಶಿಣ ಮತ್ತು ಕತ್ತರಿಸಿಕೊಂಡಿದ್ದ ತರಕಾರಿಯನ್ನು ಸೇರಿಸಿ.
* ಈ ಮಿಶ್ರಣಕ್ಕೆ ಬೇಯಿಸಿದ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. (ಚಪಾತಿ ಹಿಟ್ಟಿನ ಹದಕ್ಕೆ ಬರುವ ರೀತಿಯಲ್ಲಿ ಇರಬೇಕು)
* ಸಿದ್ಧಗೊಂಡ ಮಿಶ್ರಣಕ್ಕೆ ನಿಂಬೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ, 10 ನಿಮಿಷ ನೆನೆಯಲು ಬಿಡಿ.
* ಈಗ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ.


* ಸ್ಟೌವ್ ಮೇಲೆ ತವೆ ಇಟ್ಟು, ಬಿಸಿಯಾದ ಮೇಲೆ ಎಣ್ಣೆ ಸವರಿ. ಈಗ ತಯಾರಿಸಿದ ಉಂಡೆಗಳನ್ನು ತವ ಮೇಲಿಟ್ಟು ಚಮಚದಿಂದ ನಯವಾಗಿ ಒತ್ತಬೇಕು. ಹೀಗೆ ಒತ್ತುತ್ತಾ ಎರಡು ಬದಿ ಚೆನ್ನಾಗಿ ಬೇಯಿಸಿದರೆ ಅವಲಕ್ಕಿಯ ಹೊಸ ತಿಂಡಿ ಸವಿಯಲು ರೆಡಿ.
* ಇದನ್ನು ಕೊಬ್ಬರಿ ಚಟ್ನಿ ಅಥವಾ ತುಪ್ಪ ಅಥವಾ ಮೊಸರು ಜೊತೆ ತಿಂದರೆ ರುಚಿಯಾಗಿರುತ್ತೆ. (ಮಿಶ್ರಣ ತಯಾರಿಸುವಾಗ ಬೇಕಾದಲ್ಲಿ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಬಳಸಬಹುದು)

Comments

Leave a Reply

Your email address will not be published. Required fields are marked *