ಹೊರಗೆ ಹೋಗಬೇಡಿ ಎಂದ್ರೂ ಕೇಳಲಿಲ್ಲ – ಯುವಕರಿಬ್ಬರು ಸಾವು

ಮಂಡ್ಯ: ಕೊರೊನಾ ವೈರಸ್ ಹರಡುವುದನ್ನು ತಪ್ಪಿಸುವುದಕ್ಕೆ ಲಾಕ್‍ಡೌನ್ ಮಾಡಲಾಗಿದೆ. ಆದರೆ ಎಲ್ಲಿಗೂ ಹೋಗಬೇಡಿ ಎಂದರು ಕೇಳದ ಯುವಕರು ಕೆರೆಯಲ್ಲಿ ಆಟ ಆಡಲು ಹೋಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ವಡೇರಹಳ್ಳಿಯಲ್ಲಿ ನಡೆದಿದೆ.

ವಡೇರಹಳ್ಳಿಯಲ್ಲಿ ಭರತ್ (18) ಮತ್ತು ಅವಿನಾಶ್ (20) ಮೃತ ಯುವಕರು. ಕೆರೆಯಲ್ಲಿ ತೆಪ್ಪ ತೆಗೆದುಕೊಂಡು ಆಡ ಆಡಲು ಹೋಗಿದ್ದರು. ಆದರೆ ಇಬ್ಬರು ಯುವಕರು ತೂತಾಗಿರುವ ತೆಪ್ಪವನ್ನು ತೆಗೆದುಕೊಂಡು ಕೆರೆಯಲ್ಲಿ ಆಟವಾಡಲು ಹೋಗಿದ್ದಾರೆ. ಈ ವೇಳೆ ತೆಪ್ಪದಲ್ಲಿ ನೀರು ತುಂಬಿಕೊಂಡ ಪರಿಣಾಮ ತೆಪ್ಪ ಮುಳುಗಿದೆ. ಆಗ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಯುವಕರು ಬೆಂಗಳೂರಿನಿಂದ ಸಂಬಂಧಿಕರ ಮನೆಗೆ ಬಂದಿದ್ದರು. ಮನೆಯವರು ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಮಾಡಿದ್ದಾರೆ. ಎಲ್ಲೂ ಹೋಗಬೇಡಿ ಎಂದು ಹೇಳಿದ್ದರು. ಆದರೆ ಯುವಕರು ನಮಗೆ ಕೊರೊನಾ ವೈರಸ್ ಏನು ಮಾಡಲ್ಲ ಎಂಬಂತೆ ಕೆರೆಗೆ ಆಟವಾಡಲು ಹೋಗಿ ಸಾವನ್ನಪ್ಪಿದ್ದಾರೆ.

ಸದ್ಯಕ್ಕೆ ಯುವಕರ ಮೃತದೇಹಕ್ಕಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ. ಇತ್ತ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *