ಮುಂಬೈ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಕರ್ಫ್ಯೂ ಘೋಷಿಸಿದೆ. ಹೀಗಾಗಿ ಪೊಲೀಸರು ಜನರ ಮೇಲೆ ಕಣ್ಣೀಡಲು ಡ್ರೋನ್ ಕ್ಯಾಮೆರಾಗಳ ಮೊರೆ ಹೋಗಿದ್ದಾರೆ.
ದೇಶಾದ್ಯಂತ 21 ದಿನಗಳ ಲಾಕ್ಡೌನ್ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಯೊಂದು ರಸ್ತೆಗಳ ಮೇಲೂ ನಿಗಾ ಇಡಬೇಕಾಗಿದೆ. ಜೊತೆಗೆ ಜನರು ಎಲ್ಲಿ ಗುಂಪು ಸೇರುತ್ತಾರೆ ಎಂಬುದನ್ನು ಗಮನಿಸಿ ಅವರಿಗೆ ಎಚ್ಚರಿಕೆ ನೀಡಬೇಕಿದೆ. ಹೀಗಾಗಿ ನಗರದಲ್ಲಿ ಲಾಕ್ಡೌನ್ ಸ್ಥಿತಿಗತಿ ಮತ್ತು ಲಾಕ್ಡೌನ್ ಮಧ್ಯೆ ಜನರ ಚಲನವಲನವನ್ನು ಪರಿಶೀಸಲು ಮುಂಬೈ ಪೊಲೀಸರು ಡ್ರೋನ್ಗಳನ್ನು ಬಳಸಿಕೊಂಡಿದ್ದಾರೆ.
https://twitter.com/ANI/status/1242862035194396672
ಜನರು ಮನೆಯಲ್ಲಿ ಇದ್ದಾರಾ ಅಥವಾ ಮನೆಯಿಂದ ಹೊರ ಬಂದು ಓಡಾಡುತ್ತಿದ್ದಾರಾ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರಾಎಂಬುದನ್ನು ಪೊಲೀಸರು ಡ್ರೋನ್ ಕ್ಯಾಮರಾಗಳ ಮೂಲಕ ಪರಿಶೀಲನೆ ಮಾಡುತ್ತಿದ್ದಾರೆ.
ಸರ್ಕಾರದ ಆದೇಶಗಳನ್ನು ಪಾಲಿಸದವರ ವಿರುದ್ಧವೂ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಇದುವರೆಗೂ ಮಹಾರಾಷ್ಟ್ರದಲ್ಲಿ 125ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಜನರು ಮನೆಯಲ್ಲೇ ಇದ್ದು ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

Leave a Reply