ಕೊರೊನಾ ಎಫೆಕ್ಟ್- ಕಳೆದೊಂದು ವಾರದಿಂದ ಕಾಂಡೋಮ್ ಖರೀದಿ ಹೆಚ್ಚಳ

– ಪುರುಷರಿಗಿಂತ ಮಹಿಳೆಯರ ಪ್ರಮಾಣ ಹೆಚ್ಚು

ಮುಂಬೈ: ಕೊರೊನಾ ವೈರಸ್ ಇಡೀ ಭಾತರವನ್ನೇ ಲಾಕ್‍ಡೌನ್ ಮಾಡಿದೆ. ಜನರು ಕೂಡ ಕೊರೊನಾ ವೈರಸ್ ಭೀತಿಯಿಂದ ಮನೆಯಿಂದ ಹೊರಗೆ ಬರುತ್ತಿಲ್ಲ. ಹೀಗಾಗಿ ಪ್ರಪಂಚದಾದ್ಯಂತ ಕೊರೊನಾ ಹರಡುತ್ತಿರುವುದರಿಂದ ಜನರು ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಕಾಂಡೋಮ್‍ಗಳ ಖರೀದಿ ಕೂಡ ಹೆಚ್ಚಳವಾಗಿದೆ.

ಕೊರೊನಾದಿಂದ ಜಿಮ್‍ಗಳು, ಪಾರ್ಕ್ ಮತ್ತು ಥಿಯೇಟರ್ ಎಲ್ಲವೂ ಬಂದ್ ಆಗಿವೆ. ಅಲ್ಲದೇ ಅನೇಕ ಕಾರ್ಪೋರೇಟ್‍ಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜನರು ಆಹಾರ, ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇದರ ಜೊತೆಗೆ ಕಾಂಡೋಮ್ ಖರೀದಿ ಕೂಡ ಹೆಚ್ಚಾಗುತ್ತಿದೆ. ಅನೇಕ ವ್ಯಾಪಾರಿಗಳು ಕಳೆದ ಒಂದು ವಾರದಲ್ಲಿ ಕಾಂಡೋಮ್ ಮಾರಾಟವು ಶೇ.25 ರಿಂದ ಶೇ.50 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ದೇಶಾದ್ಯಂತ ಲಾಕ್‍ಡೌನ್ ಆಗಿದೆ. ಹೀಗಾಗಿ ಜನರಿಗೆ ಈಗ ತುಂಬಾ ಸಮಯ ಸಿಗುತ್ತಿದೆ. ಅಲ್ಲದೇ ಮನೆಯಲ್ಲಿ ಇದ್ದು ಬೇಸರಗೊಂಡಿದ್ದಾರೆ. ಈ ಕಾರಣದಿಂದಲೇ ಕಾಂಡೋಮ್‍ಗಳ ಬೇಡಿಕೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಜನರು ಮೂರು ಕಾಂಡೋಮ್‍ಗಳ ಸಣ್ಣ ಪ್ಯಾಕ್ ಖರೀದಿಸುತ್ತಿದ್ದರು. ಆದರೆ ಕಳೆದೊಂದು ವಾರದಿಂದ 10 ಮತ್ತು 20 ಕಾಂಡೋಮ್‍ಗಳಿರುವ ದೊಡ್ಡ ಪ್ಯಾಕ್‍ಗಳನ್ನು ಖರೀದಿಸುತ್ತಿದ್ದಾರೆ ಎಂದು ಅಂಗಡಿ ಮಾಲೀಕ ಹರ್ಷಲ್ ಷಾ ತಿಳಿಸಿದ್ದಾರೆ.

ಮತ್ತೊಬ್ಬ ಅಂಗಡಿ ಮಾಲೀಕ ಅಜಯ್ ಸಬ್ರವಾಲ್ ಮಾತನಾಡಿ, ಇದು ತಮಾಷೆಯಾಗಿದೆ. ಯಾಕೆಂದರೆ ಸಾಮಾನ್ಯವಾಗಿ ಹಬ್ಬ ಅಥವಾ ಹೊಸ ವರ್ಷದ ಸಂದರ್ಭದಲ್ಲಿ ಕಾಂಡೋಮ್‍ಗಳ ಮಾರಾಟದಲ್ಲಿ ಏರಿಕೆ ಕಂಡುಬರುತ್ತಿತ್ತು. ಆದರೆ ಈಗ ಜನರು ಔಷಧಿಗಳನ್ನು ಸಂಗ್ರಹಿಸುವುದರ ಜೊತೆ ಅಧಿಕ ಕಾಂಡೋಮ್‍ಗಳನ್ನು ಸಹ ಖರೀದಿಸುತ್ತಿದ್ದಾರೆ. ನನ್ನ ಅಂಗಡಿಯಲ್ಲಿ ಕಾಂಡೋಮ್ ಸ್ಟಾಕನ್ನು ಶೇ.25 ಹೆಚ್ಚಿಸಿದ್ದೇನೆ ಎಂದು ಹೇಳಿದ್ದಾರೆ.

ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ಅದರಲ್ಲೂ ಕಚೇರಿಗಳು ಮತ್ತು ಮಾರುಕಟ್ಟೆಗಳು ಸ್ಥಗಿತಗೊಂಡ ಸಮಯದಿಂದ ಕಾಂಡೋಮ್‍ಗಳ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.

ಕಾಂಡೋಮ್ ಖರೀದಿಸುವವರಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಮಾಣ ಹೆಚ್ಚಾಗಿದೆ. ಅನೇಕ ಗೃಹಿಣಿಯರು ಸಹ ಕಾಂಡೋಮ್ ಕೇಳುತ್ತಿದ್ದಾರೆ. ಮಾರಾಟದಲ್ಲಿ ಶೇ.15 ರಷ್ಟು ಹೆಚ್ಚಳವಾಗಿದೆ. ಗರ್ಭನಿರೋಧಕ ಮಾತ್ರೆಗಳ ಮಾರಾಟವು ಸಹ ಹೆಚ್ಚಾಗಿದೆ ಎಂದು ಮೆಡಿಕಲ್ ಶಾಪ್ ಮಾಲಕಿ ವಿಶಾಲ್ ಜೋಶಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *