ಹೋಂ ಕ್ವಾರಂಟೈನ್​ನಲ್ಲಿದ್ದ ಚಿಕ್ಕಬಳ್ಳಾಪುರದ ಮಹಿಳೆ ಸಾವು

ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ಶಂಕಿತ ಮಹಿಳೆಯೊಬ್ಬರು ಗೌರಿಬಿದನೂರು ನಗರದ ಮನೆಯಲ್ಲಿ ಮೃತಪಟ್ಟಿದ್ದಾರೆ.

ಮೂಲತಃ ಆಂಧ್ರದ ಹಿಂದೂಪುರ ಮೂಲದ 70 ವರ್ಷದ ಮಹಿಳೆ ಮೆಕ್ಕಾ ಪ್ರವಾಸ ಕೈಗೊಂಡು ಕಳೆದ 9 ದಿನಗಳಿಂದ ಮಗನ ಮನೆಯಲ್ಲೇ ಕ್ವಾರಂಟೈನ್‍ನಲ್ಲಿದ್ದರು.

ಮಂಗಳವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿತ್ತು. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.

ಆಸ್ಪತ್ರೆಗೆ ದಾಖಲಾದ ನಂತರ ರಾಜೀವ್ ಗಾಂಧಿ ಆಸ್ಪತ್ರೆಯಲ್ಲೇ ಅವರ ರಕ್ತದ ಮಾದರಿ ಹಾಗೂ ಗಂಟಲು ದ್ರವ ಮಾದರಿ ಪರೀಕ್ಷೆಗೆ ಸ್ಯಾಂಪಲ್ ಗಳನ್ನ ಕಲೆಕ್ಟ್ ಮಾಡಿಕೊಂಡಿದ್ದು. ವರದಿ ನಂತರವಷ್ಟೇ ಕೊರೊನಾ ಸೋಂಕು ದೃಢಪಡಲಿದೆ.

ಪಬ್ಲಿಕ್ ಟಿವಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಪ್ರತಿಕ್ರಿಯಿಸಿ, ಮೆಕ್ಕಾ ಪ್ರವಾಸದಿಂದ ಮರಳಿ ಮಗನ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು. 70 ವರ್ಷದ ಮಹಿಳೆಗೆ ರಕ್ತದೊತ್ತಡ ಇತ್ತು. ಅಷ್ಟೇ ಅಲ್ಲದೇ ಕಾಲಿಗೆ ಬೇರೆ ಗಾಯ ಮಾಡಿಕೊಂಡಿದ್ದರು. ಇದರ ಜೊತೆ ಹೃದಯದ ಸಮಸ್ಯೆ ಸಹ ಇತ್ತು. ನಿನ್ನೆ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದರು. ಮಹಿಳೆ ಮೃತಪಡಲು ನಿಜವಾದ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಆಕೆಗೆ ಕೊರೊನಾ ಸೋಂಕು ಇರುವುದು ಇನ್ನೂ ದೃಢಪಟ್ಟಿಲ್ಲ. ಆದರೂಐ ನಾವು ಮುಂಜಾಗ್ರತ ಕ್ರಮಗಳನ್ನ ಕೈಗೊಂಡಿದ್ದೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *