ಬೆಂಗ್ಳೂರು ಗ್ರಾಮಾಂತರ ಜಿಲ್ಲಾ ಗಡಿಯಲ್ಲಿ ವಾಹನಗಳಿಗೆ ಯೂಟರ್ನ್ – ನಗರದ ಪ್ರವೇಶಕ್ಕೆ ಬ್ರೇಕ್

ಬೆಂಗಳೂರು: ಕೊರೊನಾ ಭೀತಿಯಿಂದ ರಾಜ್ಯ ಲಾಕ್‍ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಯಲ್ಲಿ ಬೇರೆ ಜಿಲ್ಲೆಗಳಿಂದ ಬರುವ ವಾಹನಗಳಿಗೆ ನಿಷೇಧವನ್ನು ಯೂಟರ್ನ್ ಮುಖಾಂತರ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. 144 ಸೆಕ್ಷನ್ ಜಾರಿ ಹಿನ್ನೆಲೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಯಲಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲದ ಜಾಸ್ ಟೋಲ್‍ನಲ್ಲಿ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ, ಬೆಂಗಳೂರು ನಗರಕ್ಕೆ ಬರುವ ವಾಹನಕ್ಕೆ ಬ್ರೇಕ್ ಹಾಕಲಾಗಿದೆ. ನೆಲಮಂಗಲ ಟ್ರಾಫಿಕ್ ಪೊಲೀಸರು ರಸ್ತೆ ತಡೆ ಮಾಡಿದ್ದಾರೆ.

ದಿನ ನಿತ್ಯದ ತುರ್ತು ಸ್ಥಿತಿಗೆ ಬೇಕಾದ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೇ ಸಾಕಷ್ಟು ಜನ ಬೆಂಗಳೂರು ನಗರದಿಂದ ಹೊರಗೆ ತೆರಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ಹಳೇ ನಿಜಗಲ್ಲು ಬಳಿ ಬೇರೆ ಜಿಲ್ಲೆಗಳಿಂದ ಬರುವ ವಾಹನಗಳಿಗೆ ಬ್ರೇಕ್ ಹಾಕಲಾಗಿದೆ. ಮೈಸೂರು ಜಿಲ್ಲೆ ಮಾದರಿಯಂತೆ ವಾಹನಗಳ ವಾಪಸ್ ಕಳುಹಿಸುತ್ತಿದ್ದಾರೆ. ಅವಶ್ಯಕತೆ ಇದ್ದರೆ ಮಾತ್ರ ಬೆಂಗಳೂರಿಗೆ ಪ್ರವೇಶ ನೀಡಲಾಗುತ್ತಿದೆ. ಅಂಬುಲೆನ್ಸ್ ಮತ್ತು ತುರ್ತು ವಿಚಾರದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ಭಾಗವಾದ ಹಳೇ ನಿಜಗಲ್ಲು ಮತ್ತು ಮಹದೇವಪುರ ಗಡಿ ಭಾಗದ ಚೆಕ್ ಪೋಸ್ಟ್‌ಗೆ ನೆಲಮಂಗಲ ಸರ್ಕಲ್ ಇನ್ಸ್‌ಪೆಕ್ಟರ್ ಶಿವಣ್ಣ ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದೇ ಚೆಕ್ ಪೋಸ್ಟ್ ಸ್ಥಳದಲ್ಲೇ ಭಾನುವಾರ ರಾತ್ರಿಯಿಂದ ಥರ್ಮಾಲ್ ಪರೀಕ್ಷೆ ಸಹ ಇಲಾಖೆಗಳು ಮಾಡುತ್ತಿತ್ತು. ನೆಲಮಂಗಲ ಉಪವಿಭಾಗ ಪೊಲೀಸರಿಂದ ಕಠಿಣ ಕ್ರಮ ಕೈಗೊಂಡು, ರಾಜಧಾನಿಗೆ ಸಂಪೂರ್ಣ ವಾಹನ ನಿಷೇಧ ಹೇರಿದ್ದಾರೆ.

Comments

Leave a Reply

Your email address will not be published. Required fields are marked *