ನವದೆಹಲಿ: ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು 200 ಎಂಎಲ್ ಬಾಟಲ್ ಹ್ಯಾಂಡ್ ಸ್ಯಾನಿಟೈಜರ್ ಅನ್ನು 100 ರೂ.ಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವಂತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೇ 2 ಲೇಯರ್ ಮಾಸ್ಕ್‌ಗಳನ್ನು 8 ರೂ. ಹಾಗೂ 3 ಲೇಯರ್ ಮಾಸ್ಕ್‌ಗಳನ್ನು ಪ್ರತಿ ಪೀಸ್‍ಗೆ 10 ರೂ.ಗಿಂತ ಹೆಚ್ಚು ಬೆಲೆ ಮಾರಾಟ ಮಾಡುವಂತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ವೈರಸ್ ಬಗ್ಗೆ ಜನರಿಗೆ ಇರುವ ಭೀತಿಯನ್ನೇ ಬಂಡವಾಳವಾಗಿ ಇಟ್ಟುಕೊಂಡು ದುಬಾರಿ ಬೆಲೆಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ಮೆಡಿಕಲ್‍ಗಳಲ್ಲಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಎಚ್ಚೆತ್ತ ಸರ್ಕಾರ ಈಗ ಈ ರೀತಿ ಅಕ್ರಮವೆಸೆಗುವ ವ್ಯಾಪಾರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳ ಬೆಲೆಯನ್ನು ನಿಗದಿಗೊಳಿಸಿ, ವ್ಯಾಪಾರಸ್ಥರಿಗೆ ಈ ನಿಗದಿತ ಬೆಲೆಗೆ ಸ್ಯಾನಿಟೈಸರ್, ಮಾಸ್ಕ್ ಮಾರಾಟ ಮಾಡುವಂತೆ ಸೂಚಿಸಿದೆ.
हैंड सेनिटाइजर की 200 ML बोतल की खुदरा कीमत 100 रु. से अधिक नहीं होगी। अन्य आकार की बोतलों की कीमत भी इसी अनुपात में रहेंगी। ये कीमतें 30 जून 2020 तक पूरे देश में लागू रहेंगी। 3/3@drharshvardhan@narendramodi #IndiaFightsCorona
— Padma Bhushan Lt. Ram Vilas Paswan (@irvpaswan) March 20, 2020
200 ಎಂಎಲ್ ಬಾಟಲ್ ಹ್ಯಾಂಡ್ ಸ್ಯಾನಿಟೈಜರ್ ನ ಚಿಲ್ಲರೆ ಬೆಲೆ 100 ರೂ. ಮೀರುವಂತಿಲ್ಲ. ಈ ಬೆಲೆಗಳು 2020ರ ಜೂನ್ 30ರವರೆಗೆ ದೇಶಾದ್ಯಂತ ಅನ್ವಯವಾಗುತ್ತವೆ ಎಂದು ಟ್ವೀಟ್ ಮೂಲಕ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. ಫ್ಲಿಪ್‍ಕಾರ್ಟ್ ನಂತಹ ಆನ್‍ಲೈನ್ ಮಾರಾಟಗಾರರು ಹ್ಯಾಂಡ್ ಸ್ಯಾನಿಟೈಜರ್ ಗಳಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗಳನ್ನು ಉಲ್ಲೇಖಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆನ್‍ಲೈನ್‍ನಲ್ಲಿ ಕೆಲವು ಮಾರಾಟಗಾರರು 30 ಎಂಎಲ್ ಹ್ಯಾಂಡ್ ಸ್ಯಾನಿಟೈಜರ್ ಗೆ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಯನ್ನು 16 ಪಟ್ಟು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
आवश्यक वस्तु अधिनियम के तहत 2 और 3 प्लाई मास्क में इस्तेमाल होने वाले फैब्रिक की कीमत वही रहेगी जो 12 फरवरी 2020 को थी, 2 प्लाई मास्क की खुदरा कीमत 8 रु./मास्क और 3 प्लाई की कीमत 10 रु./मास्क से अधिक नहीं होगी। 2/3 @drharshvardhan @narendramodi #IndiaFightsCorona
— Padma Bhushan Lt. Ram Vilas Paswan (@irvpaswan) March 20, 2020
ಇದಕ್ಕೆ ಪ್ರತಿಕ್ರಿಯಿಸಿದ ಹಿಮಾಲಯ ಡ್ರಗ್ ಕಂಪನಿ ಹೀಗೆ ಅಕ್ರಮ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ. ನಮ್ಮ ಪ್ಯೂರ್ ಹ್ಯಾಂಡ್ಸ್ ಸ್ಯಾನಿಟೈಜರ್ ಗಳ ದರವನ್ನು ನಾವು ಹೆಚ್ಚಿಸಿಲ್ಲ. ಅನಧಿಕೃತ ತೃತೀಯ ಮಾರಾಟಗಾರರು ನಮ್ಮ ಕಂಪನಿ ಸ್ಯಾನಿಟೈಜರ್ ಗಳ ದರವನ್ನು ಹೆಚ್ಚಿಸಿದೆ. ಹೀಗೆ ದರ ಏರಿಸುತ್ತಿರುವ ಮಾರಾಟಗಾರರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹಿಮಾಲಯ ಟ್ವೀಟ್ ಮಾಡಿದೆ.
कोरोना वायरस #COVID19 के फैलने के बाद से बाजार में विभिन्न फेस मास्क, इसके निर्माण में लगने वाली सामग्री और हैंड सेनिटाइजर की कीमतों में बेतहाशा वृद्धि देखी गई है। सरकार ने इसे गंभीरता से लेते हुए इनकी कीमतें तय कर दी हैं। 1/3 @drharshvardhan @narendramodi #IndiaFightsCorona
— Padma Bhushan Lt. Ram Vilas Paswan (@irvpaswan) March 20, 2020
ಸ್ಯಾನಿಟೈಸರ್ ಮತ್ತು ಮಾಸ್ಕ್ ಕೊರೊನಾ ವೈರಸ್ ಅಥವಾ ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಸಮಯದಲ್ಲಿ ಹೆಚ್ಚು ಅಗತ್ಯವಿರುವ ವಸ್ತುವಾಗಿದೆ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಆದರೆ ಮಾರಾಟಗಾರರು ಮಾತ್ರ ದೇಶ ಇಂತಹ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವಾಗ ಮಾರಾಟಗಾರರು ಜನರ ಭಯವನ್ನೇ ಲಾಭ ಮಾಡಿಕೊಂಡು, ಅಧಿಕ ಬೆಲೆ ವಸ್ತುಗಳನ್ನು ಮಾರಾಟ ಮಡುತ್ತಿದೆ.

Leave a Reply