ಭಾರತದಲ್ಲಿ ಕೊರೊನಾ ಕೇಸ್ – ಯಾವ ದೇಶದಿಂದ ಬಂದಿದ್ದಾರೆ? ಯಾವ ರಾಜ್ಯದಲ್ಲಿ ಪ್ರೈಮರಿ, ಸೆಕೆಂಡರಿ ಕೇಸ್ ಎಷ್ಟಿದೆ?

ಬೆಂಗಳೂರು: ಭಾರತದಲ್ಲಿ ಕೊರೊನ ಕೇಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಸದ್ಯ ಈಗ ಕೊರೊನಾ ಪೀಡಿತರಿಂದ ಇತರ ವ್ಯಕ್ತಿಗಳಿಗೆ ಹರಡುವ ಎರಡನೇ ಹಂತದಲ್ಲಿದ್ದೇವೆ. ಈ ಹಂತದಲ್ಲಿ ನಿಯಂತ್ರಣ ಮಾಡದೇ ಇದ್ದಲ್ಲಿ ಕೊರೊನಾ ಮತ್ತಷ್ಟು ಉಲ್ಭಣವಾಗುವ ಸಾಧ್ಯತೆಯಿದೆ.

ಮಂಗಳವಾರದವರೆಗೆ ದೇಶದಲ್ಲಿ ಒಟ್ಟು 134 ಪ್ರಕರಣಗಳು ದೃಢಪಟ್ಟಿತ್ತು. ಈ ಪೈಕಿ ವಿದೇಶದಿಂದ ಮರಳಿದ 99 ಮಂದಿಗೆ ಕೊರೊನಾ ಬಂದಿತ್ತು. ವಿದೇಶದಿಂದ ಬಂದವರಿಂದ 35 ವ್ಯಕ್ತಿಗಳಿಗೆ ಕೊರೊನಾ ಹರಡಿತ್ತು.

ಯಾವ ದೇಶದಿಂದ ಎಷ್ಟು?
ಚೀನಾ ಬಳಿಕ ಕೊರೊನಾಗೆ ತತ್ತರಿಸಿ ಹೋಗಿರುವ ಇಟಲಿಯಿಂದ ಭಾರತಕ್ಕೆ ಆಗಮಿಸಿದ 37 ಮಂದಿಗೆ ಕೊರೊನಾ ಬಂದಿದೆ. ನಂತರ ದುಬೈ 21, ಇರಾನ್ 6, ಅಮೆರಿಕ 5, ಇಂಗ್ಲೆಂಡ್ 4, ಫ್ರಾನ್ಸ್ 4, ಚೀನಾದ ವುಹಾನ್ 3, ಸ್ಪೇನ್ ದೇಶದಿಂದ ಆಗಮಿಸಿದ 3 ಮಂದಿಗೆ ಕೊರೊನಾ ಬಂದಿದೆ. ಇದರ ಜೊತೆ ಉಳಿದ 16 ದೇಶಗಳಿಂದ ಆಗಮಿಸಿದ ವ್ಯಕ್ತಿಗಳಿಗೆ ಕೊರೊನಾ ಬಂದಿರುವುದು ದೃಢಪಟ್ಟಿದೆ.

ವಿದೇಶದಿಂದ ಆಗಮಿಸಿದ ಎಲ್ಲ ಪ್ರಯಾಣಿಕರಿಗೆ ಕೊರೊನಾ ಬಂದಿಲ್ಲ. ಥರ್ಮಲ್ ಸ್ಕ್ರೀನಿಂಗ್ ನಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದರೆ ಅವರನ್ನು ಪರೀಕ್ಷೆ ಮಾಡಲಾಗುತ್ತಿದೆ. ವಿದೇಶದಿಂದ ಆಗಮಿಸಿಯೂ ಕೊರೊನಾ ಬಾರದೇ ಇದ್ದರೂ ಮನೆಯಲ್ಲೇ ನಿಗಾದಲ್ಲಿ ಇರುವಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲದೇ ವೈದ್ಯಕೀಯ ಸಿಬ್ಬಂದಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದು ಆರೋಗ್ಯ ವಿಚಾರಿಸುತ್ತಿದ್ದಾರೆ.

ಯಾವ ರಾಜ್ಯದಲ್ಲಿ ಎಷ್ಟು?
ಭಾರತದಲ್ಲಿ ವಿದೇಶದಿಂದ ಬಂದವರಿಂದ(ಪ್ರೈಮರಿ ಕೇಸ್) ಮೊದಲು ಕೊರೊನಾ ಹರಡಿದರೆ ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗೆ (ಸೆಕೆಂಡರಿ ಕೇಸ್) ಹರಡುತ್ತಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಂದಿಗೆ ಕೊರೊನಾ ಬಂದಿದ್ದರೆ, ಕೇರಳ ಎರಡನೇ ಸ್ಥಾನದಲ್ಲಿದೆ.

ಮಹಾರಾಷ್ಟ್ರ – 38
ಪ್ರೈಮರಿ ಕೇಸ್ – 27
ಸೆಕೆಂಡರಿ ಕೇಸ್ – 11

ಕೇರಳ – 27
ಪ್ರೈಮರಿ ಕೇಸ್ – 19
ಸೆಕೆಂಡರಿ ಕೇಸ್ – 8

ಹರ್ಯಾಣ – 15
ಪ್ರೈಮರಿ ಕೇಸ್ – 15

ಕರ್ನಾಟಕ – 11
ಪ್ರೈಮರಿ ಕೇಸ್ – 7
ಸೆಕೆಂಡರಿ ಕೇಸ್ – 4

ದೆಹಲಿ – 7
ಪ್ರೈಮರಿ ಕೇಸ್ – 4
ಸಕೆಂಡರಿ ಕೇಸ್ – 3

ಲಡಾಖ್ – 7
ಪ್ರೈಮರಿ ಕೇಸ್ – 4
ಸೆಕೆಂಡರಿ ಕೇಸ್ – 3

ತೆಲಂಗಾಣ – 5
ಪ್ರೈಮರಿ ಕೇಸ್ – 5

ರಾಜಸ್ಥಾನ – 4
ಪ್ರೈಮರಿ ಕೇಸ್ – 4

ಪಂಜಾಬ್ – 1
ಪ್ರೈಮರಿ ಕೇಸ್ – 1

ತಮಿಳುನಾಡು -1
ಪ್ರೈಮರಿ ಕೇಸ್ – 1

ಒಡಿಶಾ -1
ಪ್ರೈಮರಿ ಕೇಸ್ -1

ಉತ್ತರಾಖಂಡ – 1
ಪ್ರೈಮರಿ ಕೇಸ್ -1

ಆಂಧ್ರಪ್ರದೇಶ – 1
ಪ್ರೈಮರಿ ಕೇಸ್ – 1

ಈ ಸುದ್ದಿ ಮಧ್ಯಾಹ್ನ ಪ್ರಕಟವಾಗುವಷ್ಟರಲ್ಲಿ ಭಾರತದ ಕೊರೊನಾ ಪೀಡಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ. ಈ ಪೈಕಿ 82(ಶೇ.56) ಮಂದಿ ಭಾರತಕ್ಕೆ ಆಗಮಿಸಿದ ವ್ಯಕ್ತಿಗಳಿಗೆ ಬಂದಿದ್ದರೆ, 65(ಶೇ.44) ಮಂದಿಗೆ ಕೊರೊನಾ ಪೀಡಿತರಿಂದ ವೈರಸ್ ಬಂದಿದೆ. ಒಟ್ಟು 123(ಶೇ.84) ಭಾರತದ ಪ್ರಜೆಗಳಿಗೆ ಕೊರೊನಾ ಬಂದಿದ್ದರೆ, ವಿದೇಶದಿಂದ ಆಗಮಿಸಿದ 24(ಶೇ.16) ಮಂದಿಗೆ ಕೊರೊನಾ ಬಂದಿದೆ.

Comments

Leave a Reply

Your email address will not be published. Required fields are marked *