ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯ್ ರಾಜ್ಯಸಭೆಗೆ ನಾಮ ನಿರ್ದೇಶನ

ನವದೆಹಲಿ: ಮಾಜಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನ ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಆದೇಶ ಹೊರಡಿಸಿದ್ದಾರೆ.

ಹಿರಿಯ ವಕೀಲೆ ಕೆ.ಟಿ.ಎಸ್ ತುಳಸಿ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ರಂಜನ್ ಗೊಗೊಯ್ ಅವರನ್ನು ನಾಮನಿರ್ದೇಶನ ಮಾಡಿದ್ದು, ಇಂದು ಅಧಿಕೃತ ಗೆಜೆಟ್ ನೋಟಿಪಿಕೇಷನ್ ಹೊರಡಿಸಲಾಗಿದೆ.

2018ರ ಅಕ್ಟೋಬರ್ 3 ರಂದು ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇಮಕಗೊಂಡಿದ್ದರು. 2019ರ ನವೆಂಬರ್ 17 ರಂದು ನಿವೃತ್ತರಾಗಿದ್ದರು. ಇವರ ನೇತೃತ್ವದ ಪೀಠ ಅಯೋಧ್ಯೆ ಭೂ ವಿವಾದ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ, ರಫೇಲ್ ಸೇರಿ ಹಲವು ಮಹತ್ವದ ಪ್ರಕರಣಗಳಲ್ಲಿ ನಿರ್ಣಾಯಕ ತೀರ್ಪುಗಳನ್ನು ನೀಡಿತ್ತು.

ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯ್ ಜೊತೆಗೆ ಸ್ವಪ್ನ ದಾಸ್ ಗುಪ್ತಾ, ಡಾ. ಸುಬ್ರಮಣಿಯನ್ ಸ್ವಾಮಿ, ಡಾ.ನರೇಂದ್ರ ಜಾಧವ್, ಸುರೇಶ್ ಗೋಪಿ, ಮೇರಿ ಕೋಮ್, ಸಂಭಾಜೀ ರಾಜೀ ಛತ್ರಪತಿ, ರೂಪಾ ಗಂಗೂಲಿ, ರಾಮ ಶಕ್ಲಾ, ರಾಕೇಶ್ ಸಿನ್ಹಾ, ಡಾ.ಸೋನಾಲ್ ಮಾನ್ಸಿಂಗ್, ರಘುನಾಥ್ ಮೋಹಪಾತ್ರ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.

Comments

Leave a Reply

Your email address will not be published. Required fields are marked *