ಮನೆಯಲ್ಲೇ ಮಾಸ್ಕ್ ತಯಾರಿಸುವ ಐಡಿಯಾ ತಿಳಿಸಿದ ಆನಂದ್ ಮಹೀಂದ್ರಾ

ನವದೆಹಲಿ: ಕೊರೊನಾ ವೈರಸ್ ದೇಶದ ಜನರನ್ನು ನಿದ್ದೆಗಡಿಸಿದ್ದು, ಸೋಂಕು ನಿಯಂತ್ರಿಸಲು ಸರ್ಕಾರಗಳು ಸಹ ಹರಸಾಹಸ ಪಡುತ್ತಿವೆ. ಅಲ್ಲದೆ ಕೊರೊನಾ ಸುದ್ದಿ ಹಬ್ಬಿದ್ದೇ ತಡ ಮಾಸ್ಕ್ ಗಳ ಬೆಲೆ ಗಗನಕ್ಕೇರಿದ್ದು, ಕೆಲವೆಡೆ ನೋ ಸ್ಟಾಕ್ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪರಿಹಾರವೆಂಬಂತೆ ಉದ್ಯಮಿ ಆನಂದ್ ಮಹೀಂದ್ರಾ ಅವರು ಮನೆಯಲ್ಲೇ ಮಾಸ್ಕ್ ತಯಾರಿಸುವ ಐಡಿಯಾ ಕೊಟ್ಟಿದ್ದಾರೆ.

ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಮಾಸ್ಕ್ ಗಳ ಕೊರತೆ ಎದುರಾಗಿದ್ದು, ಜನರು ಕೊರೊನಾದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಾಸ್ಕ್ ಗಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಸ್ಥಿತಿ ನಿಭಾಯಿಸಲು ಇದೀಗ ಉದ್ಯಮಿ ಆನಂದ್ ಮಹೀಂದ್ರಾ ಅವರು ಐಡಿಯಾವೊಂದನ್ನು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವಿಡಿಯೋ ಜೊತೆ ಸಾಲುಗಳನ್ನೂ ಬರೆದಿದ್ದಾರೆ. ಇನ್ನು ಮುಂದೆ ಮಾಸ್ಕ್‍ಗಳ ಕೊರತೆ ಉಂಟಾಗುವುದಿಲ್ಲ. ಭಾರತೀಯರು ಮಾಸ್ಟರ್ಸ್ ಆಫ್ ಜುಗಾಡ್ ಎಂದು ನಾನು ಭಾವಿಸಿದ್ದೇನೆ ಎಂಬ ಸಾಲುಗಳನ್ನು ಬರೆದಿದ್ದಾರೆ.

ಯುವತಿ ಮನೆಯಲ್ಲೇ ಸಿಗುವ ಕೇವಲ ಮೂರು ವಸ್ತುಗಳನ್ನು ಬಳಸಿ ಮಾಸ್ಕ್ ತಯಾರಿಸುತ್ತಾಳೆ. ಟಿಶ್ಶು ಪೇಪರ್, ಎರಡು ರಬ್ಬರ್ ಬ್ಯಾಂಡ್ ಹಾಗೂ ಸ್ಟೆಪ್ಲರ್ ಸಹಾಯದಿಂದ ಮಾಸ್ಕ್ ತಯಾರಿಸುತ್ತಾಳೆ. ಈ ವಿಡಿಯೋವನ್ನು ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ.

ಈ ತಂತ್ರಕ್ಕೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಮಾತ್ರವಲ್ಲದೆ ಹಲವರು ರೀಟ್ವೀಟ್ ಮಾಡುವ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಈ ಐಡಿಯಾವನ್ನು ಬಹುತೇಕರು ಇಷ್ಟ ಪಟ್ಟಿದ್ದು, ಈ ವಿಡಿಯೋ ನನಗೆ ತುಂಬಾ ಇಷ್ಟವಾಯಿತು. ವಿಡಿಯೋ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಹೇಳುತ್ತಿದ್ದಾರೆ. ಇನ್ನೂ ಹಲವರು ಮನೆಯ ವಸ್ತುಗಳನ್ನು ಬಳಸಿ ವಿವಿಧ ಬಗೆಯಲ್ಲಿ ಮಾಸ್ಕ್ ತಯಾರಿಸುವ ವಿಧಾನದ ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿದ್ದಾರೆ.

https://twitter.com/ChahalPahal2/status/1237754263620575232?

Comments

Leave a Reply

Your email address will not be published. Required fields are marked *