‘ನೀನು ನನಗೆ ಪ್ರೇರಣೆ’ – ಮಗನೊಂದಿಗೆ ಇರುವ ಮುದ್ದಾದ ಫೋಟೋ ಶೇರ್ ಮಾಡಿದ ಸಾನಿಯಾ

ನವದೆಹಲಿ: ನಾನು ಸಾಧನೆ ಮಾಡಲು, ಇನ್ನಷ್ಟು ಉತ್ತಮಗೊಳ್ಳಲು ನನ್ನ ಮಗ ನನಗೆ ಪ್ರೇರೇಪಿಸುತ್ತಾನೆ ಎಂದು ಮಗನೊಂದಿಗೆ ಇರುವ ಮುದ್ದಾದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಮಹಿಳಾ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಂಚಿಕೊಂಡಿದ್ದಾರೆ.

ಇಂಡೋನೇಷ್ಯಾ ವಿರುದ್ಧ ಮ್ಯಾಚ್ ಟೈ ಆಗಿ ಮೊದಲ ಬಾರಿಗೆ ಭಾರತ ಫೆಡ್ ಕಪ್ ಟೆನ್ನಿಸ್‍ನ ವರ್ಲ್ಡ್ ಗ್ರೂಪ್ ಫ್ಲೇ ಆಫ್‍ಗೆ ಎಂಟ್ರಿಕೊಟ್ಟಿರುವ ಸುದ್ದಿಯನ್ನ ಸಾನಿಯಾ ವಿಶಿಷ್ಟವಾಗಿ ತಿಳಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಸಾನಿಯಾ ತಮ್ಮ ಮಗ ಇಜ್ಹಾನ್‍ನೊಂದಿಗೆ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ತಾಯಿ ಮಗನ ಮುದ್ದಾದ ಫೋಟೋ ನೋಡಿ ನೆಟ್ಟಿಗರು, ಅಭಿಮಾನಿಗಳು ಫಿದಾ ಆಗಿದ್ದಾರೆ.

ಒಂದೆಡೆ ಸಾನಿಯಾ ಟೆನ್ನಿಸ್ ಫಿಲ್ಡ್ ನಲ್ಲಿ ಭಾರತಕ್ಕಾಗಿ ಅದ್ಭುತವಾಗಿ ಆಡಿ, ಆಟಗಾರ್ತಿಯಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇನ್ನೊಂದೆಡೆ ಟೆನ್ನಿಸ್ ಫಿಲ್ಡ್ ನಲ್ಲಿ ಮಗನನ್ನು ಎತ್ತಿಕೊಂಡು ಹೋಗುತ್ತಿರುವ ಫೋಟೋವನ್ನು ಹಂಚಿಕೊಂಡು ತಾಯಿಯಾಗಿ ಎಲ್ಲರ ಮನ ಕದ್ದಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಈ 1 ಚಿತ್ರದಲ್ಲಿ ನನ್ನ ಬದುಕು. ಇದನ್ನು ಬೇರೆ ರೀತಿ ಹೇಳಲು ನನಗೆ ಬರುವುದಿಲ್ಲ. ಇಂಡೋನೇಷ್ಯಾದ ವಿರುದ್ಧ ನಾವು ಟೈ ಮ್ಯಾಚ್ ಆಡಿ ಮೊದಲ ಬಾರಿಗೆ ಬಾರಿಗೆ ಭಾರತ ಫೆಡ್ ಕಪ್ ಟೆನ್ನಿಸ್‍ನ ವರ್ಲ್ಡ್ ಗ್ರೂಪ್ ಪ್ಲೇ ಆಫ್‍ಗೆ ಎಂಟ್ರಿಕೊಟ್ಟಿದೆ. ನಾನು ಸಾಧನೆ ಮಾಡಲು, ನಾನು ಮಾಡುವ ಕೆಲಸವನ್ನು ಇನ್ನಷ್ಟು ಉತ್ತಮವಾಗಿ ಮಾಡಲು ಇವನು ನನಗೆ ಪ್ರೇರಣೆ ನೀಡುತ್ತಾನೆ ಎಂದು ಬರೆದು ಇಜ್ಹಾನ್‍ನನ್ನು ತಾವು ಎತ್ತಿಕೊಂಡು ಹೋಗುತ್ತಿರುವ ಫೋಟೋವನ್ನು ಸಾನಿಯಾ ಟ್ವೀಟ್ ಮಾಡಿದ್ದಾರೆ.

ಈ ಫೋಟೋ ನೋಡಿ ಅಭಿಮಾನಿಗಳು, ನೆಟ್ಟಿಗರು ಫಿದಾ ಆಗಿದ್ದು, ನಿಮ್ಮ ಸಾಧನೆಗೆ ಸಲಾಂ. ತಾಯಿ-ಮಗನ ಪ್ರೀತಿಗೂ ಸಲಾಂ ಎಂದಿದ್ದಾರೆ. ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದಿಂದ ಸ್ಪರ್ಧಿಸಿ ದೇಶಕ್ಕೆ ಹೆಮ್ಮೆ ತಂದ ಸಾನಿಯಾ ಹಾಗೂ ಇತರೆ ಭಾರತೀಯ ಟೆನ್ನಿಸ್ ಆಟಗಾರರಿಗೆ ಭೇಷ್ ಎಂದಿದ್ದಾರೆ. ಸಾನಿಯಾ, ಇಜ್ಹಾನ್ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಮನಸೋತಿದ್ದಾರೆ.

ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು ಟೆನ್ನಿಸ್ ಆಟಗಾರರು ಫೆಡ್ ಕಪ್ ಫೈನಲ್ ನಲ್ಲಿ ಆಡಬೇಕಾಗುತ್ತದೆ. ಕೊರೊನಾ ವೈರಸ್ ಭೀತಿಯಿಂದ ಏಪ್ರಿಲ್ 17 ಮತ್ತು 18ರಂದು ನಡೆಯಬೇಕಿದ್ದ ಭಾರತ ಮತ್ತು ಲಾಟ್ವಿಯಾ ನಡುವಿನ ಫೆಡ್ ಕಪ್ ಪ್ಲೇ ಆಫ್ ಮ್ಯಾಚ್ ಮುಂದೂಡಲಾಗಿದೆ. ಅಷ್ಟೇ ಅಲ್ಲದೇ ಏಪ್ರಿಲ್ 14ರಿಂದ 19ರವರೆಗೆ ನಡೆಯಬೇಕಿದ್ದ ಫೆಡ್ ಕಪ್ ಫೈನಲ್ ಮ್ಯಾಚ್‍ಗಳ ದಿನಾಂಕವನ್ನು ಕೂಡ ಮುಂಡೂಡಲಾಗಿದೆ ಎಂದು ಅಂತರಾಷ್ಟ್ರೀಯ ಟೆನ್ನಿಸ್ ಫೆಡರೇಶನ್(ಐಟಿಎಫ್) ಬುಧವಾರ ತಿಳಿಸಿದೆ.

Comments

Leave a Reply

Your email address will not be published. Required fields are marked *