ರಾಜಕೀಯಕ್ಕೆ ರಜನಿಕಾಂತ್ ಅಧಿಕೃತ ಎಂಟ್ರಿ – ಸಿಎಂ ಆಗಲ್ಲ ಎಂದ ತಲೈವಾ

-ಪ್ರಸ್ತುತ ರಾಜಕೀಯ ಬದಲಾಗಬೇಕು

ಚೆನ್ನೈ: ರಾಜಕೀಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದು, ಇಂದು ಚೆನ್ನೈನಲ್ಲಿ ಕಾರ್ಯಕರ್ತರ ಜೊತೆ ಸಂವಾದ ನಡೆಸುತ್ತಿದ್ದಾರೆ.

ಬಿಸಿನೆಸ್ ಆಗಿರೋ ಪ್ರಸ್ತುತ ರಾಜಕೀಯ ಬದಲಾಗಬೇಕಿದೆ. ಪ್ರಾಮಾಣಿಕ, ಯುವ, ಶಿಕ್ಷಿತ ಪಕ್ಷ ಬೇಕಿದೆ. ಏಕ ನಾಯಕ ರಾಜಕೀಯ ಬದಲಾಗಬೇಕು. ನಾನು ಪಕ್ಷದ ಅಧ್ಯಕ್ಷನಾಗ್ತೇನೆ ಆದ್ರೆ ಸಿಎಂ ಆಗೋ ಬಯಕೆ ಇಲ್ಲ ಎಂದು ಸಂವಾದದಲ್ಲಿ ತಲೈವಾ ಕಾರ್ಯಕರ್ತರಿಗೆ ಹೇಳಿದರು.

ಪಕ್ಷದ ಅಧ್ಯಕ್ಷರು ಸರ್ಕಾರದಲ್ಲಿ ಮೂಗು ತೂರಿಸಬಾರದು. ಸಿಎಂ ಆಗ್ತೇನೆ ಅಂತ ಯೋಚಿಸೋಕೆ ಆಗಲ್ಲ. ಹೊಸ ಪಕ್ಷ ಕಟ್ಟಿ ಹೊಸಬರು, ಯುವಕರಿಗೆ ಪಕ್ಷದಲ್ಲಿ ಆದ್ಯತೆ ಕೊಡುತ್ತೇನೆ. ನಿಷ್ಠಾವಂತರಿಗೆ ಪಕ್ಷದಲ್ಲಿ ಆದ್ಯತೆ ನೀಡಲಾಗುತ್ತೆ. ಪ್ರಾಮಾಣಿಕ ವ್ಯಕ್ತಿಗಳಿಗೆ ಸೀಟ್ ಕೊಡ್ತೇನೆ ಎಂದು ರಜನಿಕಾಂತ್ ತಿಳಿಸಿದರು.

ಈ ಹಿಂದೆ ಕೂಡ ರಜನಿಕಾಂತ್ ಅವರು ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದರು. ಈ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸಿನಿಮಾರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ ರಜನಿಕಾಂತ್ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಇಷ್ಟು ದಿನ ಸಿನಿಮಾದಲ್ಲಿ ತಮ್ಮ ಕಮಾಲ್ ತೋರಿಸಿದ ತಲೈವಾ ರಾಜಕೀಯದಲ್ಲಿ ಹೇಗೆ ಕಮಾಲ್ ಮಾಡ್ತಾರೆ ಅನ್ನೋದನ್ನ ನೋಡಲು ಅಭಿಮಾನಿಗಳು ಕಾತುರದಿಂದಿದ್ದಾರೆ.

Comments

Leave a Reply

Your email address will not be published. Required fields are marked *