ಗೋಮೂತ್ರ ಸೇವಿಸಿದ್ರೆ ಕೊರೊನಾ ಬರಲ್ಲ – ಹರಿದಾಡುತ್ತಿದೆ ಶ್ರೀರಾಮುಲು ಟ್ವೀಟ್ ಫೋಟೋ

ಬೆಂಗಳೂರು: ಗೋಮೂತ್ರ ಸೇವಿಸೋದ್ರಿಂದ, ಸಗಣಿಯನ್ನು ದೇಹಕ್ಕೆ ಸವರಿಕೊಂಡರೆ ಕೊರೊನಾ ಬರುವುದಿಲ್ಲ ಎಂದು ಬರೆದಿರುವ ಸಚಿವ ರಾಮುಲು ಖಾತೆ ಟ್ವೀಟ್ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗಂಜಲ ಕುಡಿಯುವುದಿಂದ ಹಾಗೂ ಸಗಣಿಯನ್ನು ದೇಹಕ್ಕೆ ಸವರಿಕೊಳ್ಳುವುದರಿಂದ ಕೊರೊನಾ ವೈರಸ್ ತಡೆಗಟ್ಟಬಹುದು ಎಂದು ಟ್ವಿಟ್ಟರ್ ನಲ್ಲಿ ಬರೆಯಲಾಗಿದೆ.

ಎಷ್ಟು ಗಂಟೆಗೆ ಈ ಟ್ವೀಟ್ ಪ್ರಕಟವಾಗಿದೆ ಎನ್ನುವ ವಿವರ ಇದರಲ್ಲಿ ಇಲ್ಲ. ಒಟ್ಟು 17 ಮಂದಿ ಕಮೆಂಟ್ ಮಾಡಿದ್ದರೆ 48 ಮಂದಿ ರಿಟ್ವೀಟ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಶ್ರೀರಾಮುಲು ತಂಡವನ್ನು ಸಂಪರ್ಕಿಸಿದರೆ ನಾವು ಟ್ವೀಟ್ ಮಾಡಿಲ್ಲ, ಸಚಿವರ ಖಾತೆ ಹ್ಯಾಕ್ ಆಗಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

ಖಾತೆ ಹ್ಯಾಕ್ ಆಗಿದೆಯೋ ಅಥವಾ ಅಧಿಕೃತ ಖಾತೆಯನ್ನು ಬಳಸಿ ಫೋಟೋ ಎಡಿಟ್ ಮಾಡಿ ಫೋಟೋ ತಯಾರಿಸಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹರಿದಾಡುತ್ತಿದೆ.

Comments

Leave a Reply

Your email address will not be published. Required fields are marked *