ಬೆಂಗಳೂರು: ಕೊರೊನಾ ವೈರಸ್ಗೆ ಈಗಾಗಲೇ ದೇಶಾದ್ಯಂತ ಜನರು ಭಯಭೀತರಾಗಿದ್ದಾರೆ. ಜೊತೆಗೆ ಕೊರೊನಾ ಬಂದಾಗಿನಿಂದ ಒಂದಲ್ಲ ಒಂದು ಎಫೆಕ್ಟ್ಗಳನ್ನು ಕಾಣುತ್ತಿದ್ದೇವೆ. ಆದರೆ ಈಗ ಈ ಕೊರೊನಾ ನಾನ್ ವೆಜ್ ಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಮಟನ್ ಮತ್ತು ಫಿಶ್ ಕೊಳ್ಳಂಗಿಲ್ಲ, ತಿನ್ನಂಗಿಲ್ಲವೆನ್ನುವಂತಾಗಿದೆ.
ಯಾವುದೇ ಫುಡ್ ಸ್ಟ್ರೀಟ್ಗೆ, ನಾನ್ ವೆಜ್ ಹೊಟೇಲ್ಗೆ ಹೋದರೆ ಮೊದಲು ಬಹುತೇಕರು ಮಟನ್, ಫಿಶ್ ರೆಸಿಪಿಗಳನ್ನು ಆರ್ಡರ್ ಮಾಡುತ್ತಿದ್ದರು. ಅದರಲ್ಲೂ ಡಯಟ್ ಮಾಡೋರಿಗೆ, ಜಿಮ್ನಲ್ಲಿ ವರ್ಕೌಟ್ ಮಾಡೋರಿಗೆ ಮತ್ತು ಕೂಲ್ ಫುಡ್ ಇಷ್ಟ ಪಡುವವರಿಗೆ ಮಟನ್ ಅಚ್ಚುಮೆಚ್ಚು. ಇನ್ಮುಂದೆ ಫಿಶ್, ಮಟನ್ ತಿನ್ನೋ ಮುನ್ನ ಯೋಚಿಸಬೇಕಾಗಿದೆ.

ಹೌದು..ಚಿಕನ್, ಕೋಳಿ ತಿಂದರೆ ಕೊರೊನಾ ವೈರಸ್ ಬರುತ್ತೆ ಅಂತ ಇತ್ತೀಚೆಗೆ ಕೆಲವರು ಸೋಷಿಯಲ್ ಮಿಡಿಯಾದಲ್ಲಿ ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಈ ಫೇಕ್ ಸುದ್ದಿಗೆ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿದೆ. ಹೀಗಾಗಿ ಜನರು ಕೋಳಿ ಮಾಂಸ ತಿನ್ನುವುದನ್ನೇ ಬಿಡುತ್ತಿದ್ದಾರೆ. ಇದರಿಂದ ಚಿಕನ್ ಬೇಡಿಕೆ ಕಡಿಮೆಯಾಗಿದೆ. 130, 140 ಇದ್ದ ಚಿಕನ್ ರೇಟ್ 80, 90ಕ್ಕೆ ಇಳಿದಿದೆ. ಇದರಿಂದ ಮಟನ್ ಹಾಗೂ ಫಿಶ್ ರೇಟ್ ಹೆಚ್ಚಾಗಿದೆ.
ಕಳೆದ ವಾರದ ಬೆಲೆ ಇವತ್ತಿನ ಬೆಲೆ ನೋಡೋದಾದ್ರೆ:
ಕಳೆದ ವಾರ ಕೆ.ಜಿ ಮಟನ್ಗೆ 550 ರೂ ಇತ್ತು. ಆದರೆ ಇಂದು 700 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಕಳೆದ ವಾರ ಕೆ.ಜಿಗೆ 120ರೂ. ಇದ್ದ ಫಿಶ್ ಇಂದು 200 ರೂಪಾಯಿಗೆ ಜಿಗಿದಿದೆ.

ಮಟನ್ ಖಾದ್ಯಗಳನ್ನ ತುಂಬಾ ಇಷ್ಟಪಡುವರಿಗೆ ಇದು ಕೊಂಚ ಬೇಸರ ಮೂಡಿಸಿದೆ. ಹೀಗಾಗಿ ಮಟನ್ ಹಾಗೂ ಫಿಶ್ ರೇಟ್ ಖಾದ್ಯ ಪ್ರಿಯರ ಬಾಯಿ ಸುಡುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದಿನ ಯುಗಾದಿ ವೇಳೆಗೆ ಮಟನ್ ರೇಟ್ 800 ರೂ.ಗಳಿಗೆ ಏರಿಕೆಯಾದರೂ ಅಚ್ಚರಿ ಪಡಬೇಕಿಲ್ಲ. ಆದರೆ ಇದು ನಾನ್ವೆಜ್ ಪ್ರಿಯರಿಗೆ ಬೇಸರವನ್ನುಂಟು ಮಾಡಿದೆ ಎಂದು ನಾನ್ ವೆಜ್ ಪ್ರಿಯ ಮಹಮದ್ ಇದ್ರೀಸ್ ಚೌದ್ರೀ ಹೇಳಿದ್ದಾರೆ.

Leave a Reply