ಸ್ಪೈಡರ್, ಬ್ಯಾಟ್, ಸೂಪರ್ ಮ್ಯಾನ್ ಎಲೋದ್ರು: ಆರ್​ಜಿವಿ ಪ್ರಶ್ನೆ

ಮುಂಬೈ: ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ಮತ್ತು ಸೂಪರ್ ಮ್ಯಾನ್ ಎಲ್ಲಿ ಹೋದರು ಎಂದು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಸೂಪರ್ ಮ್ಯಾನ್, ಬ್ಯಾಟ್ ಮ್ಯಾನ್, ಸೂಪರ್ ಮ್ಯಾನ್ ಎಲ್ಲಿ ಹೋಗಿದ್ದಾರೆ? ವಿಲನ್ ಕೊರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿದೆ. ಬೇರೆ ಗ್ರಹಕ್ಕೆ ಹೋದರು ಎಂದು ಮಾತ್ರ ಹೇಳಬೇಡಿ ಎಂದು ಬರೆದು ಕೊನೆಗೆ ಒಂದು ಎಮೋಜಿ ಹಾಕಿದ್ದಾರೆ.

ಮಾರ್ಚ್ ಮೂರರಂದು ಟ್ವೀಟ್ ಮಾಡಿದ್ದ ಆರ್​ಜಿವಿ, ನಮ್ಮ ಸಾವು ಸಹ ಚೀನಾದ ವೈರಸ್ ನಿಂದಲೇ ಬರುತ್ತೆ ಎಂದು ಊಹಿಸಿರಲಿಲ್ಲ ಅಂತ ಬರೆದುಕೊಂಡಿದ್ದರು. ಅದಾದ ನಂತರ ಕೊರೊನಾ ವೈರಸ್ ಕುರಿತ ಕಾರ್ಟೂನ್, ವಿಷಯಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

 

ಸಿನಿಮಾಗಳಲ್ಲಿ ಆಪತ್ತು ಬಂದಾಗ ಹೀರೋಗಳಾದ ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ಮತ್ತು ಸೂಪರ್ ಮ್ಯಾನ್ ಬಂದು ಎಲ್ಲರನ್ನು ರಕ್ಷಿಸುತ್ತಾರೆ. ಹೃತಿಕ್ ರೋಷನ್ ಅಭಿನಯದ ಕ್ರಿಶ್-3ರಲ್ಲಿ ವೈರಸ್ ಅಟ್ಯಾಕ್ ಮಾಡಿರುತ್ತಾರೆ. ಆಗ ತಂದೆ ಕಂಡುಹಿಡಿದ ಅನಿಲ ರೂಪದ ಔಷಧಿಯನ್ನು ಇಡೀ ಜನಕ್ಕೆ ತಲುಪುವಂತೆ ಕ್ರಿಶ್ ಮಾಡ್ತಾನೆ. ಅದೇ ರೀತಿ ಈಗಲೂ ಸೂಪರ್ ಹೀರೋಗಳು ಬಂದ್ರೆ ಒಳ್ಳೆಯದು ಎಂದು ಫನ್ನಿಯಾಗಿ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *