ಕೈದಿಗಳಿಗೂ ತಟ್ಟಿದ ಮಹಾಮಾರಿ ಕೊರೊನಾ ಎಫೆಕ್ಟ್

ಬೆಂಗಳೂರು: ಮಹಾಮಾರಿ ಕೊರೊನಾ ಎಫೆಕ್ಟ್ ಜೈಲುಗಳಿಗೂ ತಟ್ಟಿದೆ.

ಮಹಾಮಾರಿಯನ್ನು ಮಟ್ಟ ಹಾಕಲು ಹರಸಹಾಸಪಡುತ್ತಿರುವ ರಾಜ್ಯ ಸರ್ಕಾರ ವಿವಿಧ ರೀತಿಯ ವಿವಿಧ ಕಡೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಂತೆ ಮುನ್ನೇಚರಿಕೆ ಕ್ರಮವಾಗಿ ರಾಜ್ಯ ಕಾರಾಗೃಹ ಇಲಾಖೆ ಹಾಗೂ ಸುಧಾರಣಾ ಸೇವೆ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದ ಎಲ್ಲಾ ಕೇಂದ್ರ ಕಾರಾಗೃಹ ಹಾಗೂ ಜಿಲ್ಲಾ ಕಾರಾ ಗೃಹಗಳಲ್ಲಿರುವ ಕೈದಿಗಳಿಗೆ ಕೊರೊನಾ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಕೈದಿಗಳ ಸುರಕ್ಷ ದೃಷ್ಠಿಯಿಂದ ಕಾರಾಗೃಹ ಇಲಾಖೆ ಮುಂದಾಗಿದೆ. ಇಲಾಖೆ ಎಡಿಜಿಪಿ ಅಲೋಕುಮಾರ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಆದೇಶ ಹೊರಡಿಸಲಾಗಿದೆ. ರಾಜ್ಯದ ಎಂಟು ಕಾರಾಗೃಹಗಳು ಜಿಲ್ಲಾ ಮಟ್ಟದ 21 ಕಾರಾಗೃಹ ತಾಲೂಕು ಮಟ್ಟದ 28 ಕಾರಾಗೃಹ ಸೇರಿ ಒಟ್ಟು 58 ಕಾರಾಗೃಹಗಳಿಗೆ ಕೊರೊನಾ ಎಫ್ಟೆಕ್ಟ್ ಅರಿವು ಮೂಡಿಸಲು ಮುಂದಾಗಿದ್ದಾರೆ.

ಕೈದಿಗಳನ್ನು ನೋಡಲು ಸಂಬಂಧಿಕರು ಹಾಗೂ ಸ್ನೇಹಿತರು ಬಂದು ಜೈಲಿನಲ್ಲಿ ಭೇಟಿ ಆಗುತ್ತಿರುತ್ತಾರೆ. ಹಾಗಾಗಿ ರಾಜ್ಯದ ಎಲ್ಲಾ ಕೈದಿಗಳಿಗೆ ಮಹಾಮಾರಿ ಬಗ್ಗೆ ಅರಿವು ಮೂಡಿಸಲು ಇಲಾಖೆ ಮುಂದಾಗಿದೆ.

Comments

Leave a Reply

Your email address will not be published. Required fields are marked *