ಪಿಯುಸಿ ಪ್ರಶ್ನೆಪತ್ರಿಕೆ ಲೀಕ್ ಭಯ ಹಿನ್ನೆಲೆ – ಲೀಕಾಸುರರಿಗೆ ಬಿಗಿ ಮಾಡಿರೋ ಪೊಲೀಸ್ರು

ಬೆಂಗಳೂರು: ಪಿಯುಸಿ ಪರೀಕ್ಷೆ ಈಗಾಗಲೇ ಆರಂಭವಾಗಿದ್ದು, ಮಕ್ಕಳು ಕಷ್ಟ ಪಟ್ಟು ಓದಿ ಒಳ್ಳೆ ಮಾರ್ಕ್ಸ್ ತೆಗೆದು, ಭವಿಷ್ಯ ರೂಪಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಆದರೆ ಪ್ರಿಪರೇಟರಿ ಪೇಪರ್ ಲೀಕ್ ಆಗಿ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕ ಮನೆ ಮಾಡಿತ್ತು. ಹೀಗಾಗಿ ಪ್ರಶ್ನೆಪತ್ರಿಕೆ ಲೀಕಾಸುರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಪಿಯುಸಿ ಪಶ್ನೆಪತ್ರಿಕೆ ಲೀಕ್ ಆಗದಂತೆ ತಡೆಯಲು ಪ್ರಯತ್ನ ನಡೆಸಿದ್ದಾರೆ.

ಪ್ರಿಪರೇಟರಿ ಪರೀಕ್ಷೆಯ ಪೇಪರ್ ಲೀಕ್ ಮಾಡಿದ್ದವರನ್ನ ಸಹ ಅಂದರ್ ಮಾಡಲಾಗಿದೆ. ಈಗಾಗಲೇ ವಿದ್ಯಾರ್ಥಿಗಳು ಸೇರಿದಂತೆ 14 ಮಂದಿಯನ್ನ ವಿಚಾರಣೆ ನಡೆಸಲಾಗಿದೆ. ಜೊತೆಗೆ ಪೊಲೀಸರು ಪೂರ್ವಸಿದ್ಧತಾ ಪತ್ರಿಕೆ ಲೀಕ್ ಮಾಡಿದವರನ್ನು ಅರೆಸ್ಟ್ ಮಾಡಿದ್ದಾರೆ. ಇದಲ್ಲದೆ ಪ್ರಶ್ನೆಪತ್ರಿಕೆ ಲೀಕಾಸುರರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಕಳೆದ ಬಾರಿ ಲೀಕ್ ಮಾಡಿದ್ದ ಕಿಂಗ್‍ಪಿನ್ ಶಿವಕುಮಾರ್, ಬಸವರಾಜ್, ಅಮೀರ್ ಅಹ್ಮದ್ ಹಾಗೂ ಅನಿಲ್ ಫ್ರಾನ್ಸಿಸ್ ಚಲನವಲನದ ಮೇಲೆ ಸಹ ಕಣ್ಣಿಡಲಾಗಿದೆ. ಈ ಹಿಂದೆ ಪಿಯುಸಿ ಪತ್ರಿಕೆ ಲೀಕ್ ಮಾಡಿ ಜೈಲು ಸೇರಿದ್ದ ಕಿಂಗ್‍ಪಿನ್‍ಗಳ ಮೇಲೆ ಕೋಕಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಸದ್ಯ ಕಿಂಗ್‍ಪಿನ್‍ಗಳ ಪ್ರತಿಯೊಂದು ಚಲನವಲನದ ಮೇಲೆ ಸಿಸಿಬಿ ಕಣ್ಣಿಟ್ಟಿದ್ದು, ಪಿಯು ಪರೀಕ್ಷೆ ಸುಗಮವಾಗಿ ನಡೆಯಲು ಕಸರತ್ತು ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *