ನಿಯಂತ್ರಣ ಕಳೆದುಕೊಂಡು ದೇವಾಲಯಕ್ಕೆ ನುಗ್ಗಿದ ಸ್ಕೂಟಿ

– ಭಾರೀ ಅವಘಡದಿಂದ ಪಾರಾದ ಯುವತಿ

ಚಿಕ್ಕಬಳ್ಳಾಪುರ: ಯುವತಿಯೊಬ್ಬಳ ಸ್ಕೂಟಿ ನಿಯಂತ್ರಣ ತಪ್ಪಿ ದೇವಾಲಯದೊಳಗೆ ನುಗ್ಗಿದ್ದು, ಭಾರೀ ಅನಾಹುತವೊಮದು ತಪ್ಪಿದೆ.

ಹೌದು. ಸ್ಕೂಟಿಯಲ್ಲಿ ದೇವಾಲಯಕ್ಕೆ ಆಗಮಿಸಿದ ಯುವತಿ ದೇವರಿಗೆ ನಮಸ್ಕಾರ ಹಾಕಿ ವಾಪಸ್ಸಾಗುತ್ತಿದ್ದಳು. ಆದರೆ ವಾಪಸ್ ಹೋಗಲು ಸ್ಕೂಟಿ ಸ್ಟಾರ್ಟ್ ಮಾಡಿದ ಯುವತಿಗೆ ಸ್ಕೂಟಿ ನಿಯಂತ್ರಣ ತಪ್ಪಿ ಸ್ಕೂಟಿ ಸಮೇತ ಯುವತಿ ದೇವಾಲಯದ ಓಳಗೆ ನುಗ್ಗಿ ಕೆಳಗೆ ಬಿದ್ದಿದ್ದಾಳೆ.

ಈ ಘಟನೆ ಎಲ್ಲಿ ನಡೆದಿರೋದು ಎಂಬುದು ಗೊತ್ತಾಗಿಲ್ಲ. ಆದರೆ ಘಟನೆಯ ಸಿಸಿಟಿವಿಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ನಿಖರ ಮಾಹಿತಿ ಇಲ್ಲ.

ಘಟನೆಯಲ್ಲಿ ಯುವತಿಗೆ ಯಾವುದೇ ಗಾಯವಾಗಿಲ್ಲ. ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ದೇವಾಲಯದ ಹೊರಗಡೆಯಿಂದಲೇ ದೇವರಿಗೆ ನಮಸ್ಕಾರ ಹಾಕಿದ ಪರಿಣಾಮ ದೇವರೇ ಒಳಗೆ ಕರೆಸಿಕೊಂಡಿದ್ದಾರೆ ಅಂತ ಕಾಲೆಳೆಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *