ವಿದ್ಯಾರ್ಥಿಯ ಮರ್ಮಾಂಗ ಕತ್ತರಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್ – ಸಲಿಂಗಕಾಮಕ್ಕಾಗಿ ಕಟ್

– ತಾನೇ ಮರ್ಮಾಂಗ ಕತ್ತರಿಸಿಕೊಂಡಿದ್ದ ವಿದ್ಯಾರ್ಥಿ
– ಮರ್ಮಾಂಗ ಕೊಯ್ದುಕೊಂಡ್ರೆ ಮದ್ವೆ ಮಾಡೋದಿಲ್ಲ ಎಂದು ಪ್ರೇರೇಪಣೆ

ಮಂಡ್ಯ: ವಿದ್ಯಾರ್ಥಿಯೊಬ್ಬನ ಮರ್ಮಾಂಗ ಕತ್ತರಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸಲಿಂಗಕಾಮಕ್ಕಾಗಿ ವಿದ್ಯಾರ್ಥಿಯ ಮರ್ಮಾಂಗವನ್ನೇ ವ್ಯಕ್ತಿಯೊಬ್ಬ ಕಟ್ ಮಾಡಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪಾಂಡವಪುರ ತಾಲೂಕು ಸೀತಾಪುರ ಗ್ರಾಮದ ಸುನಿಲ್ ಕುಮಾರ್ ಅಲಿಯಾಸ್ ಸುನಿ (28) ಬಂಧಿತ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿ ನೀಡಿದ ಹೇಳಿಕೆ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ಸುನಿಲ್ ಕುಮಾರ್ ಸಲಿಂಗಕಾಮಿಯಾಗಿದ್ದು, ಪ್ರತಿ ಶುಕ್ರವಾರ ಸಂತ್ರಸ್ತ ವಿದ್ಯಾರ್ಥಿ ಜೊತೆಯಲ್ಲಿ ದೇವಾಲಯಗಳಿಗೆ ತೆರಳುತ್ತಿದ್ದನು. ತನಗೆ ದೇವರು ಬರುತ್ತದೆ ಎಂದು ವಿದ್ಯಾರ್ಥಿಯನ್ನು ನಂಬಿಸಿದ್ದನು. ಮುಂದೆ ಮದುವೆ ಮಾಡಿಕೊಳ್ಳದೆ ತನ್ನ ಜೊತೆಯಲ್ಲೇ ಇರಬೇಕು ಎಂದು ಹೆದರಿಸಿದ್ದನು.  ಮರ್ಮಾಂಗ ಕೊಯ್ದುಕೊಂಡರೆ ಮನೆಯವರು ಮದುವೆ ಮಾಡುವುದಿಲ್ಲ ಎಂದು ವಿದ್ಯಾರ್ಥಿಗೆ ಪ್ರೇರೇಪಿಸಿದ್ದನು. ಆತನ ಮಾತಿನಂತೆ ವಿದ್ಯಾರ್ಥಿ ತಾನೇ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದ ಎನ್ನಲಾಗಿದೆ.

ಫೆ.14ರಂದು ಜಿಲ್ಲೆಯ ಪಾಂಡವುಪರ ತಾಲೂಕಿನ ಸೀತಾಪುರ ಗ್ರಾಮದ ಬಳಿ ಈ ಪ್ರಕರಣ ನಡೆದಿತ್ತು. ಅಂದು ತನ್ನನ್ನು ಡ್ರಾಪ್ ಕೊಡುವ ನೆಪದಲ್ಲಿ ಮೂವರು ದುಷ್ಕರ್ಮಿಗಳು ಕಾರಿಗೆ ಹತ್ತಿಸಿಕೊಂಡರು. ನಂತರ ಮರ್ಮಾಂಗ ಕತ್ತರಿಸಿ ಕೆಳಗೆ ಇಳಿಸಿ ಹೋಗಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿ ಹೇಳಿಕೆ ನೀಡಿದ್ದನು. ಈಗ ವಿಚಾರಣೆ ವೇಳೆ ಪ್ರಕರಣದ ಸತ್ಯಾಂಶ ಬಯಲಾಗಿದೆ.

ಏನಿದು ಪ್ರಕರಣ?
ವಿದ್ಯಾರ್ಥಿಯೂ ಕೆಆರ್‌ಪೇಟೆ ಕಾಲೇಜು ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ಹೋಗಲು ಪಾಂಡವಪುರ ತಾಲೂಕಿನ ಸೀತಾಪುರ ಗೇಟ್ ಬಳಿ ನಿಂತಿದ್ದನು. ಆಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿದ್ಯಾರ್ಥಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಐದು ಕಿಲೋಮೀಟರ್ ದೂರ ಹೋಗಿದ್ದಾನೆ. ನಂತರ ವಿದ್ಯಾರ್ಥಿಯ ಮರ್ಮಾಂಗವನ್ನು ಕಾರಿನಲ್ಲೇ ದುಷ್ಕರ್ಮಿಗಳು ಕತ್ತರಿಸಿ ವಿದ್ಯಾರ್ಥಿಯನ್ನು ರಸ್ತೆ ಬದಿಯಲ್ಲಿ ಎಸೆದು ಪರಾರಿಯಾಗಿದ್ದರು ಎಂದು ದೂರಿನಲ್ಲಿ ದಾಖಲಾಗಿತ್ತು.

ನಂತರ ವಿದ್ಯಾರ್ಥಿ ನರಳಾಡುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಈ ಪ್ರಕರಣ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Comments

Leave a Reply

Your email address will not be published. Required fields are marked *