ಮದ್ವೆಯಾಗಿ 10 ವರ್ಷಗಳ ನಂತ್ರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಕೊಂಕಣ ಸೇನ್ ಶರ್ಮಾ

ಮುಂಬೈ: ಬಾಲಿವುಡ್ ಜೋಡಿ ಕೊಂಕಣ ಸೇನ್ ಶರ್ಮಾ ಹಾಗೂ ರಣ್‍ವೀರ್ ಷೋರೆ ಮದುವೆಯಾಗಿ 10 ವರ್ಷಗಳ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

2010ರಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಕೊಂಕಣ ಹಾಗೂ ರಣ್‍ವೀರ್ ಮದುವೆ ಆಗಿದ್ದರು. ಆದರೆ 2015ರಲ್ಲಿ ಇಬ್ಬರು ದೂರ ಆಗಿದ್ದರು. ಇದೀಗ ಇಬ್ಬರು ತಮ್ಮ ತಮ್ಮ ಇಚ್ಛೆಯಿಂದ ಕಾನೂನಿನ ಮೂಲಕ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ.

ರಣ್‍ವೀರ್ ಹಾಗೂ ಕೊಂಕಣ ಅವರ ವಿಚ್ಛೇದನದ ಪ್ರಕ್ರಿಯೆ ಎಲ್ಲರೂ ಪೂರ್ಣಗೊಂಡಿದ್ದು, 6 ತಿಂಗಳಲ್ಲಿ ಇಬ್ಬರಿಗೂ ಡಿವೋರ್ಸ್ ಸಿಗಲಿದೆ. ವಿಚ್ಛೇದನ ಅರ್ಜಿ ಸಲ್ಲಿಸುವ ಮೊದಲು ಇಬ್ಬರು ದೀರ್ಘಕಾಲ ಕೌನ್ಸೆಲಿಂಗ್ ಕೂಡ ನಡೆಸಲಾಗಿದ್ದು, ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಹಾಗಾಗಿ ಇಬ್ಬರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು.

ಕೊಂಕಣ ಹಾಗೂ ರಣ್‍ವೀರ್ 2007ರಂದು ಡೇಟಿಂಗ್ ಮಾಡಲು ಶುರು ಮಾಡಿದ್ದರು. 3 ವರ್ಷಗಳ ಬಳಿಕ ಅಂದರೆ 2010ರಲ್ಲಿ ಇಬ್ಬರು ಮದುವೆಯಾಗಿದ್ದು, 2011ರಲ್ಲಿ ಕೊಂಕಣ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಬ್ಬರು ದೂರ ಇದ್ದರು ತಮ್ಮ ಮಗನ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು.

ರಣ್‍ವೀರ್ ಹಾಗೂ ಕೊಂಕಣ ಟ್ರಾಫಿಕ್ ಸಿಗ್ನಲ್, ಅಜಾ ನಚ್ಚಲೆ, ಯೂ ಹೋತಾ ತೋ ಕ್ಯಾ ಹೋತಾ, ಮಿಕ್ಸಡ್ ಡಬಲ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

Comments

Leave a Reply

Your email address will not be published. Required fields are marked *