ನಳಿನ್ ಕುಮಾರ್ ಕಟೀಲ್ ಮತ್ತು ಮೈಕ್ ಮಹಿಮೆ!

ಬೆಂಗಳೂರು: ಮೈಕ್‍ಗೂ ನಳಿನ್ ಕುಮಾರ್ ಕಟೀಲ್‍ಗೂ ಏನೋ ಒಂಥರಾ ಅಟ್ಯಾಚ್ಮೆಂಟ್ ಅನ್ಸುತ್ತೆ. ಆಗಾಗ್ಗೆ ಮೈಕ್ ವಿಚಾರಕ್ಕೆ ಕಟೀಲ್ ಸ್ವಲ್ಪ ಗಮನ ಸೆಳೆಯುತ್ತಾರೆ. ಇಂದು ಬೆಂಗಳೂರಿನಲ್ಲೂ ಮೈಕ್ ವಿಚಾರಕ್ಕೆ ಕಟೀಲ್ ಎಲ್ಲರ ನಗುವಿಗೆ ಕಾರಣಕರ್ತರಾದ್ರು. ಬೆಂಗಳೂರಲ್ಲಿ ನಡೆದ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮೈಕ್ ಹಿಡಿದ ಕಟೀಲ್ ಹೇಳಿದ್ದನ್ನು ಕೇಳಿದ್ರೆ ನಗು ಉಕ್ಕಿಬಾರದೇ ಇರದು.

ಬಸವನಗುಡಿಯ ಮರಾಠ ಭವನದಲ್ಲಿ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ಭಾಗದ ಜಿಲ್ಲಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಇತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಲು ಪೋಡಿಯಂ ಮುಂದೆ ಬಂದು ನಿಂತ್ರು. ಪೋಡಿಯಂನಲ್ಲಿದ್ದ ಮೈಕ್ ಆಗಾಗ್ಗೆ ಕೆಳಭಾಗಕ್ಕೆ ಬಾಗುತ್ತಿತ್ತು. ಅದನ್ನ ಮತ್ತೆ ಮತ್ತೆ ಮೇಲೆತ್ತಲು ಪ್ರಯತ್ನಿಸಿದ ಕಟೀಲ್ ವೇದಿಕೆ ಮೇಲಿದ್ದವರನ್ನ ನೋಡಿ ನಕ್ಕರು. ಅದೇಕೋ ಈ ಮೈಕ್ ಸ್ವಲ್ಪ ನನ್ನ ಥರಾನೇ ಅಂತ ಹೇಳಿದ್ದೆ ತಡ, ಇಡೀ ಸಭೆ ನಗೆಗಡಲಿಲ್ಲ ತೇಲಿತ್ತು.

ಅಂದಹಾಗೆ ಕಟೀಲ್ ಮತ್ತು ಮೈಕ್ ನಡುವಿನ ಅಟ್ಯಾಚ್ಮೆಂಟ್ ಇಂದು ಹೊಸದೇನಲ್ಲ. 2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೂ ಕಟೀಲ್ ಮೈಕ್ ಹಿಡಿದು ಮತ ಕೇಳಿದ್ದರು. ಮೈಕನ್ನೇ ನಿಮ್ಮ ಕಾಲು ಅಂತ ತಿಳಿದುಕೊಂಡು ನಮಸ್ಕರಿಸುತ್ತೇನೆ, ನನಗೆ ಮತ ಹಾಕಿ ಎಂದು ಪ್ರಚಾರ ಮಾಡಿದ್ದರು. ಇದು ಅವತ್ತಿನ ಮಟ್ಟಿಗೆ ದೊಡ್ಡ ಮಟ್ಟದ ಟ್ರೋಲ್ ಆಗಿತ್ತು.

Comments

Leave a Reply

Your email address will not be published. Required fields are marked *