ಪ್ರಿಯಕರನೊಂದಿಗೆ ಅತ್ತೆಯ ಕೈಗೆ ಸಿಕ್ಕಿಬಿದ್ದಳು- ಸೊಸೆಯಿಂದ ಅತ್ತೆಯ ಕೊಲೆ

-ಅತ್ತೆ, ಗಂಡ ಇಲ್ಲದಿದ್ದಾಗ ಇನಿಯನನ್ನ ಕರೆಸಿಕೊಂಡ್ಳು
-ಮನೆಯಲ್ಲೇ ಗೆಳೆಯನೊಂದಿಗೆ ಸರಸ ಸಲ್ಲಾಪ

ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಸ್ವಂತ ಅತ್ತೆಯನ್ನೇ ಕೊಲೆ ಮಾಡಿದ್ದ ಸೊಸೆಯನ್ನು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಸೌಂದರ್ಯ ಅತ್ತೆಯನ್ನೇ ಕೊಲೆ ಮಾಡಿ ಹೈಡ್ರಾಮ ಆಡಿದ್ದ ಖತಾರ್ನಾಕ್ ಸೊಸೆ. ಬ್ಯಾಟರಾಯನಪುರದಲ್ಲಿ ಫೆಬ್ರವರಿ 19 ರಂದು ವೃದ್ಧೆ ರಾಜಮ್ಮ ಮನೆಯಲ್ಲಿದ್ದ ವೇಳೆ ಬರ್ಬರವಾಗಿ ಕೊಲೆಯಾಗಿದ್ದರು. ಈ ವೇಳೆ ಗಂಡನಿಗೆ ಕರೆ ಮಾಡಿದ ಸೊಸೆ ಸೌಂದರ್ಯ ಅತ್ತೆ ಒಬ್ಬಳೇ ಮನೆಯಲ್ಲಿದ್ದ ವೇಳೆ ಯಾರೋ ಅಪರಿಚಿತರು, ಚಿನ್ನಾಭರಣಕ್ಕಾಗಿ ಅತ್ತೆ ರಾಜಮ್ಮಳನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಳು.

ವಿಷಯ ತಿಳಿದ ಸ್ಥಳಕ್ಕೆ ಬಂದ ಸಂಬಂಧಿಕರು ಹಾಗೂ ಪೊಲೀಸರ ಮುಂದೆ ಸೊಸೆ ಸೌಂದರ್ಯ ಕಣ್ಣೀರು ಹಾಕಿ ಹೈಡ್ರಾಮಾ ಮಾಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸೊಸೆಯ ನಡುವಳಿಕೆಯಿಂದ ಅನುಮಾನಗೊಂಡ ವಿಚಾರಣೆ ನಡೆಸಿದ ವೇಳೆ ಸ್ಫೋಟಕ ಸತ್ಯ ಹೊರಬಿದ್ದಿದೆ. ಸೊಸೆ ಸೌಂದರ್ಯ ಮದುವೆಯಾಗಿ ಗಂಡನಿದ್ದರು ಮತ್ತೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.

ಫೆಬ್ರವರಿ 19 ರಂದು ಗಂಡ ಕೆಲಸಕ್ಕೆ ಹೋದ ವೇಳೆ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಸೊಸೆ ಸೌಂದರ್ಯ ಮನೆಯಲ್ಲೇ ಸರಸ ಸಲ್ಲಾಪದಲ್ಲಿ ತೊಡಗಿದ್ದಳು. ಈ ವೇಳೆ ಹೊರ ಹೋಗಿದ್ದ ಅತ್ತೆ ರಾಜಮ್ಮ ಸೊಸೆಯ ಕಳ್ಳಾಟವನ್ನು ಕಣ್ಣಾರೆ ನೋಡಿದ್ದರು. ಈ ವಿಷಯವನ್ನು ಗಂಡನಿಗೆ ಹೇಳುತ್ತಾಳೆ ಎಂದು ಭಯಬಿದ್ದು ಅತ್ತೆಯ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಚಿನ್ನಾಭರಣಕ್ಕಾಗಿ ಯಾರೋ ಕೊಲೆ ಮಾಡಿದ್ದಾರೆ ಎಂದು ಡ್ರಾಮಾ ಮಾಡಿದ್ದಳು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಪೊಲೀಸರು ಸೊಸೆ ಸೌಂದರ್ಯ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *