ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯ ಗುಂಡಕ್ಕಿ ಹತ್ಯೆ

-ಕಳೆದ ತಿಂಗ್ಳಷ್ಟೇ ಲಾಸ್ ಎಂಜಲೀಸ್‍ಗೆ ಹೋಗಿದ್ದ ವ್ಯಕ್ತಿ

ವಾಷಿಂಗ್ಟನ್: ಅಮೆರಿಕದ ಲಾಸ್ ಎಂಜಲೀಸ್‍ನಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.

ಮನಿಂದರ್ ಸಾಹಿ ಕೊಲೆಯಾದ ವ್ಯಕ್ತಿ. ಹರಿಯಾಣದ ಕರ್ನಲ್ ನಿವಾಸಿಯಾಗಿರುವ ಮನಿಂದರ್ ಅಮೆರಿಕದ ಲಾಸ್ ಎಂಜಲೀಸ್‍ನಲ್ಲಿ ಇರುವ ಸ್ಟೋರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದನು. ಈ ವೇಳೆ ಕಳ್ಳತನಕ್ಕಾಗಿ ಬಂದ ಇಬ್ಬರು ದುಷ್ಕರ್ಮಿಗಳು ಆತನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

ಶನಿವಾರ ಬೆಳಗ್ಗೆ 5.30ಕ್ಕೆ ಮನಿಂದರ್ ಸ್ಟೋರಿನಲ್ಲಿ ಕೆಲಸ ಮಾಡುತ್ತಿದ್ದನು. ಈ ವೇಳೆ ಇಬ್ಬರು ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್ ಹಾಕಿ ಕಳ್ಳತನ ಮಾಡಲು ಬಂದಿದ್ದರು. ಕೌಂಟರಿನಲ್ಲಿ ಕುಳಿತ್ತಿದ್ದ ಮನಿಂದರ್ ನನ್ನು ನೋಡಿದ ಕಳ್ಳರು ಆತನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಬಳಿಕ ಅಲ್ಲಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ಈ ಬಗ್ಗೆ ಅಮೆರಿಕ ಪೊಲೀಸರು ಪ್ರತಿಕ್ರಿಯಿಸಿ, ನಾವು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ವಿಟ್ಟಿಯರ್ ಪೊಲೀಸ್ ಇಲಾಖೆ ತನ್ನ ಟ್ವಿಟ್ಟರಿನಲ್ಲಿ ಮಾಸ್ಕ್ ಹಾಕಿಕೊಂಡಿರುವ ದುಷ್ಕರ್ಮಿಯ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಮನಿಂದರ್ ಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಕಳೆದ ತಿಂಗಳು 31ರಂದು ಮನಿಂದರ್ ಭಾರತದಿಂದ ಅಮೆರಿಕಗೆ ಬಂದಿದ್ದನು. ಮನೆಗಾಗಿ ಮನಿಂದರ್ ಒಬ್ಬನೇ ದುಡಿಯುತ್ತಿದ್ದನು. ದುಡಿದ ಹಣವನ್ನು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಕಳುಹಿಸುತ್ತಿದ್ದನು ಎಂದು ಅಮೆರಿಕದಲ್ಲಿರುವ ಮನಿಂದರ್ ಸಂಬಂಧಿಕರು ಹೇಳಿದ್ದಾರೆ.

ಸದ್ಯ ಮನಿಂದರ್ ಮೃತದೇಹವನ್ನು ಭಾರತಕ್ಕೆ ತರಲು ಆತನ ಸಹೋದರಿ ಕೇಂದ್ರ ಸರ್ಕಾರದ ಸಹಾಯ ಕೇಳಿದ್ದಾರೆ.

Comments

Leave a Reply

Your email address will not be published. Required fields are marked *