ಬಿಜೆಪಿ ಶಾಸಕನ ಪತ್ನಿಯಿಂದ ಮಹಾರಾಷ್ಟ್ರಕ್ಕೆ ಜೈಕಾರ- ಕ್ಷಮೆಯಾಚನೆ

ಕಲಬುರಗಿ: ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರಕ್ಕೆ ಜೈ ಎಂದು ಹೇಳಿ ಸುದ್ದಿಯಾಗಿದ್ದಾರೆ.

ಶಾಸಕ ಬಸಬರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ್ದರು. ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ಶಹಬಾದ್ ನಗರದಲ್ಲಿ ಬುಧವಾರ ಸಂಜೆ ಮರಾಠ ಯುವಕ ಮಂಡಳಿ ವತಿಯಿಂದ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಯಶ್ರೀ ಮತ್ತಿಮೂಡ ಪಾಲ್ಗೊಂಡಿದ್ದರು.

ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ್ದು, ಭಾಷಣದ ಕೊನೆಯಲ್ಲಿ ಜೈ ಶಿವಾಜಿ ಅಂತ ಹೇಳಿದ್ದಾರೆ. ಅದಾದ ಬಳಿಕ ಜೈ ಕರ್ನಾಟಕ ಅನ್ನೋ ಬದಲು ಜೈ ಮಹಾರಾಷ್ಟ್ರ ಎಂದು ಹೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕ್ಷಮೆಯಾಚನೆ:
ಜೈ ಮಹಾರಾಷ್ಟ್ರ ಎಂಬ ಹೇಳಿಕೆ ವೀಡಿಯೋ ವೈರಲ್ ಆಗುತ್ತಿದ್ದಂತೆ, ನಾನು ಉದ್ದೇಶಪೂರ್ವಕವಾಗಿ ಅಂದಿಲ್ಲ. ಕಾರ್ಯಕ್ರಮದಲ್ಲಿ ಮರಾಠಿಯಲ್ಲಿ ಮಾತನಾಡುತ್ತಿದ್ದೆ. ಕೊನೆಯಲ್ಲಿ ಜೈ ಕರ್ನಾಟಕ ಅನ್ನೋ ಬದಲು ಬಾಯಿ ತಪ್ಪಿ ಜೈ ಮಹಾರಾಷ್ಟ್ರ ಅಂತ ಹೇಳಿದ್ದೇನೆ. ಈ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಾನು ಎಲ್ಲಿ ಹೋದರೂ ಕನ್ನಡದಲ್ಲಿಯೇ ಮಾತನಾಡುತ್ತೇನೆ ಎಂದು  ಜಯಶ್ರೀ ಮತ್ತಿಮೂಡ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *