ಮಾರ್ಚ್ ಎರಡನೇ ವಾರದಲ್ಲಿ ಬಿಬಿಎಂಪಿ ಬಜೆಟ್

ಬೆಂಗಳೂರು: ರಾಜ್ಯ ಸರ್ಕಾರದ 2020-21ರ ಸಾಲಿನ ಬಜೆಟ್ ಮಂಡನೆ ಬೆನ್ನಲ್ಲೇ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ಮಾರ್ಚ್ 5ರಂದು ರಾಜ್ಯ ಬಜೆಟ್ ಸಿಎಂ ಬಿ.ಎಸ್ ಯಡಿಯೂರಪ್ಪ ಮಂಡಿಸಲಿದ್ದಾರೆ. ಇದರ ಬೆನ್ನಲ್ಲೇ ಮಾರ್ಚ್ ಎರಡನೇ ವಾರದಲ್ಲಿ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ.

ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಈ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. 2019-20ನೇ ಸಾಲಿನ ಬಜೆಟ್ ಅನ್ನು ಫೆ. 19ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಮಂಡಿಸಿದ್ದರು. ಆರಂಭದಲ್ಲಿ 10,688 ಕೋಟಿ ರೂ. ಇದ್ದ ಬಜೆಟ್‍ಗೆ ಕೆಲ ಮಾರ್ಪಾಡುಗಳನ್ನು ಮಾಡಿದ್ದರಿಂದ ಮೊತ್ತ 12,74.77 ಕೋಟಿ ರೂ.ಗೆ ಹಿಗ್ಗಿತ್ತು. ಈ ಪರಿಷ್ಕ್ರತ ಬಜೆಟ್‍ಗೆ ಪಾಲಿಕೆಯ ಕೌನ್ಸಿಲ್ ಒಪ್ಪಿಗೆ ನೀಡಿತ್ತು.

ಬಿಬಿಎಂಪಿ ಇತಿಹಾಸದಲ್ಲಿ 12,574 ಕೋಟಿ ರೂ. ವೆಚ್ಚದ ಬೃಹತ್ ಬಜೆಟ್ ಮಂಡಿಸಿರುವುದು ಇದೇ ಮೊದಲು ಆಗಿತ್ತು. ಈಗ 4 ಸಾವಿರ ಕೋಟಿ ಇಳಿಸಿ ಎಂದು ಆರ್ಥಿಕ ಇಲಾಖೆ ಸೂಚಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಬಜೆಟ್ ಗಾತ್ರ 9,0574 ಕೋಟಿ ರೂ.ಗೆ ಇಳಿಕೆಯಾಗಿತು. ಈ ಬಾರಿಯೂ 2020-21ರ ಪಾಲಿಕೆ ಬಜೆಟ್ 10 ಸಾವಿರ ಕೋಟಿ ತಲುಪುವ ಸಾಧ್ಯತೆ ಇದೆ. ಕೇಂದ್ರ, ರಾಜ್ಯ ಹಾಗೂ ಪಾಲಿಕೆ ಎಲ್ಲ ಕಡೆ ಬಿಜೆಪಿ ಆಡಳಿತ ಹಿನ್ನೆಲೆಯಲ್ಲಿ ಬಹುತೇಕ ಬಜೆಟ್ ಬೇಗ ಅನುಮೊದನೆ ಪಡೆಯಲಿದೆ.

ಈ ಬಾರಿ ಬಜೆಟ್ ಘೋಷಣೆ, ಭರವಸೆಗಳ ಬಜೆಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಬಿಜೆಪಿ ಮೇಯರ್ ಅವಧಿ ಮುಗಿದ ಬಳಿಕ ಮುಂದಿನ 7 ತಿಂಗಳಲ್ಲಿ ಬಿಬಿಎಂಪಿ ಕಾರ್ಪೊರೇಟರ್ ಗಳ ಚುನಾವಣೆ ಇದೆ. ಹೀಗಾಗಿ ಭರವಸೆಗಳು, ನಗರದ ಅಭಿವೃದ್ಧಿ ಶೀರ್ಷಿಕೆ ಅಡಿಯಲ್ಲಿ ಭಾಗಶಃ ಹೊಸ ಘೋಷಣೆಗಳ ಬಜೆಟ್ ಮಂಡನೆಯಾಗಲಿದೆ. ಈ ಸಂಬಂಧ ಮಾತನಾಡಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಸದ್ಯ ಅಧಿಕಾರಿಗಳ ಮಟ್ಟದಲ್ಲಿ ಒಂದು ಸಭೆ ಆಗಿದೆ. ಬಜೆಟ್ ಕರಡು ಪ್ರತಿ ಸಿದ್ಧವಾಗುತ್ತಿದೆ. 2019-20ರ ಬಜೆಟ್‍ನಲ್ಲಿ ಶೇ. 80ರಷ್ಟು ಬಜೆಟ್ ಅನುಷ್ಠಾನಗೊಂಡಿದೆ ಎಂದರು.

ಆದರೆ ಪಾಲಿಕೆ ಇತಿಹಾಸದಲ್ಲಿ ಬಜೆಟ್ ಅನುಷ್ಠಾನ ಶೇ.80 ರಷ್ಟು ಬೆರಳೆಕೆಯಷ್ಟು ಬಾರಿ ಮಾತ್ರ. ಹೀಗಾಗಿ ಕಾಮಗಾರಿಗೆ ವರ್ಕ್ ಆರ್ಡರ್, ಜಾಬ್ ಕೋಡ್ ನೀಡಿದಾಕ್ಷಣ ಬಜೆಟ್ ಅನುಷ್ಠಾನ ಎಂಬ ಲೆಕ್ಕ ಮಾಡಿರೊದಾದರೆ ಈ ಬಜೆಟ್ ಅನುಷ್ಠಾನದ ಅನುಪಾತವೇ ಅನುಮಾನ ಹುಟ್ಟಿಸಿದೆ. ಕಳೆದ ಬಜೆಟ್‍ನಲ್ಲಿ ಕಲ್ಯಾಣ ಕಾರ್ಯಕ್ರಮ, ಶಿಕ್ಷಣ ಅನುದಾನಗಳ ಉಳಿತಾಯ ಪ್ರಮಾಣ ಜಾಸ್ತಿ ಎಂಬ ಮಾತು ಇದೆ.

Comments

Leave a Reply

Your email address will not be published. Required fields are marked *