ಕಣ್ಮುಚ್ಚಿ ಪ್ರಾರ್ಥನೆ ಹೇಳುತ್ತಲೇ ಕ್ಯಾಂಡಿ ಸವಿದ ಬಾಲಕ- ವಿಡಿಯೋ ವೈರಲ್

ನವದೆಹಲಿ: ಶಾಲೆಯಲ್ಲಿ ಬೆಳಗ್ಗಿನ ಪ್ರಾರ್ಥನೆಯ ವೇಳೆ ಪುಟ್ಟ ಬಾಲಕನೊಬ್ಬ ಕ್ಯಾಂಡಿ ಸವಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ತಾಗಿ ವೈರಲ್ ಆಗುತ್ತಿದೆ.

ಬಾಲಕನ ಈ ವಿಡಿಯೋ ನೋಡುತ್ತಿದ್ದರೆ ನಿಮ್ಮ ಮುಖದಲ್ಲೂ ಒಂದು ಸಣ್ಣ ನಗು ಬಾರದೇ ಇರದು. ಮುಗ್ಧ ಬಾಲಕ ತನ್ನ ಎರಡೂ ಕೈಗಳನ್ನು ಜೋಡಿಸಿ, ಬೆರಳಿನ ಮಧ್ಯೆ ಕ್ಯಾಂಡಿ ಇಟ್ಟುಕೊಂಡಿದ್ದಾನೆ. ಅಲ್ಲದೆ ಕಣ್ಣು ಮುಚ್ಚಿ ಪ್ರಾರ್ಥನೆ ಹೇಳುತ್ತಲೇ ತನ್ನ ಕೈಯಲ್ಲಿದ್ದ ಕ್ಯಾಂಡಿಯನ್ನು ಸವಿಯುತ್ತಾನೆ.

ಬಾಲಕನ ಈ ವಿಡಿಯೋವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಐಎಎಸ್ ಆಫೀಸರ್ ಅವಿನಾಶ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 30 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಪುಟ್ಟ ಬಾಲಕ, ಶಾಲೆಯಲ್ಲಿ ಪ್ರಾರ್ಥನೆಯ ಸಂದರ್ಭದಲ್ಲಿ ತನ್ನ ಎರಡೂ ಕಣ್ಣುಗಳನ್ನು ಮುಚ್ಚಿಕೊಂಡು ಜೊತೆಗೆ ತನ್ನ ಎರಡೂ ಕೈಗಳನ್ನು ಕೂಡ ಜೋಡಿಸಿಕೊಂಡು ನಿಂತಿದ್ದಾನೆ. ಮೊದಲು ನೋಡಿದಾಗ ಬಾಲಕ ಪ್ರಾರ್ಥನೆ ಹೇಳುವುದರಲ್ಲಿ ಮಗ್ನನಾಗಿದ್ದಾನೆ ಎಂದು ಅಂದುಕೊಳ್ಳಬೇಕು. ಆದರೆ ಪ್ರಾರ್ಥನೆ ಹೇಳುತ್ತಲೇ ಆತ ತನ್ನ ಕೈಯಲ್ಲಿದ್ದ ಕ್ಯಾಂಡಿ ಸವಿದಿದ್ದಾನೆ. ನಂತರ ಜೋರಾಗಿಯೇ ಪ್ರಾರ್ಥನೆ ಹೇಳಿದ್ದಾನೆ. ಇದನ್ನೆಲ್ಲ ಗಮನಿಸಿದ ಪಕ್ಕದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

ಈ ವಿಡಿಯೋ ನೋಡುತ್ತಿದ್ದಂತೆಯೇ ನಮಗೆ ತಕ್ಷಣ ನಮ್ಮ ಶಾಲಾ ದಿನಗಳು ನೆನಪಾಗುತ್ತದೆ. ಶಾಲೆಯಲ್ಲಿ ಪ್ರಾರ್ಥನೆ, ಊಟದ ವೇಳೆ ಏನೆಲ್ಲ ಮಾಡಿದ್ದೆವು ಎಂಬುದು ಒಂದು ಬಾರಿ ನೆನಪಾಗುತ್ತದೆ.

ಸದ್ಯ ಈ ವಿಡಿಯೋಗೆ ಸಾವಿರಾರು ಕಮೆಂಟ್ ಗಳು ಬರುತ್ತಿವೆ. ಕೆಲವರು ಅದ್ಭುತ ಎಂದು ಬರೆದುಕೊಂಡರೆ ಮತ್ತೆ ಕೆಲವರು ತಮಾಷೆ ಮಾಡಬೇಡಿ ಸರ್, ಆತ ಧ್ಯಾನ ಮಾಡುತ್ತಿದ್ದಾನೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *