ಮಂಗ್ಳೂರಿನ ಕೃತ್ಯಕ್ಕೆ ಬೆಂಗ್ಳೂರಿನ ದ್ವೇಷವೇ ಕಾರಣ!

ಬೆಂಗಳೂರು: ಮಂಗಳೂರಿನಲ್ಲಿ ಸಜೀವ ಬಾಂಬ್ ಸೃಷ್ಟಿಸಿದ ಆತಂಕ ಅಷ್ಟಿಷ್ಟಲ್ಲ. ಈ ಘಟನೆ ಹಿಂದಿರುವ ವ್ಯಕ್ತಿ ಯಾರು? ಇದಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಪೊಲೀಸರಿಗೆ ಕಾಡುತ್ತಿದೆ.

ಉಡುಪಿ ಜಿಲ್ಲೆ ಮಣಿಪಾಲ್‍ನ ಕೆಎಚ್‍ಬಿ ಕಾಲೋನಿ ನಿವಾಸಿ ಆದಿತ್ಯ ರಾವ್ ಎಂಜಿನಿಯರಿಂಗ್, ಎಂಬಿಎ ಪದವೀಧರ. ಆದಿತ್ಯ ಏರ್‍ಪೋರ್ಟ್ ಅಧಿಕಾರಿಗಳ ಮೇಲೆ ಇದ್ದ ಹಳೇ ದ್ವೇಷದಿಂದ ಭಾನುವಾರ ಮಂಗಳೂರು ಏರ್‍ಪೋರ್ಟ್‍ನಲ್ಲಿ ಸ್ಫೋಟಕವನ್ನು ಇಟ್ಟು ಬಂದಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಮಂಗ್ಳೂರು ಸ್ಫೋಟ ಪ್ರಕರಣ- ಪಬ್ಲಿಕ್ ಟಿವಿಗೆ ಶಂಕಿತ ಉಗ್ರನ ವಿಡಿಯೋಗಳು ಲಭ್ಯ 

ಆದಿತ್ಯನನ್ನು 2018ರಲ್ಲಿ ಹುಸಿ ಬಾಂಬ್ ಕರೆ ಮಾಡಿದ್ದ ಆರೋಪದಲ್ಲಿ 6 ತಿಂಗಳು ಬಂಧಿಸಲಾಗಿತ್ತು. ಇದರ ಸೇಡಿಗಾಗಿ ಆದಿತ್ಯ ಮಂಗಳೂರು ಏರ್‍ಪೋರ್ಟ್‍ನಲ್ಲಿ ಸ್ಫೋಟಕ ತುಂಬಿದ್ದ ಬ್ಯಾಗ್ ಇರಿಸಿ ಬಂದಿದ್ದಾನೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ.

ಆದಿತ್ಯನ ಕ್ರೈಂ ಹಿನ್ನೆಲೆ:
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ ವೇಳೆ ಆದಿತ್ಯ ಕೆಲವೊಂದು ದಾಖಲೆಗಳನ್ನು ನೀಡಿರಲಿಲ್ಲ. ದಾಖಲೆ ನೀಡದಿದ್ದಕ್ಕೆ ಕೆಲಸ ಕೊಡುವುದಕ್ಕೆ ನಿರಾಕರಿಸಲಾಗಿತ್ತು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು 2018ರ ಆಗಸ್ಟ್ 30ರಂದು ಬೆಂಗಳೂರು ಏರ್ ಪೋರ್ಟಿಗೆ ಕರೆ ಮಾಡಿ ವಿಮಾನ ಮತ್ತು ಪಾರ್ಕಿಂಗ್ ಲಾಟ್‍ನಲ್ಲಿ ಬಾಂಬ್ ಇರಿಸಿದ್ದೀನಿ ಎಂದು ಹುಸಿ ಕರೆ ಮಾಡಿದ್ದ. ತನಿಖೆ ನಡೆಸಿದ್ದ ಪೊಲೀಸರು ಆತನನ್ನು ಬಂಧಿಸಿದ್ದರು.

ಬಂಧನದ ಬಳಿಕ ಆದಿತ್ಯ ಅದೇ ಮೊದಲ ಬಾರಿ ಬೆದರಿಕೆ ಕರೆ ಮಾಡಿದ್ದಲ್ಲ. ಹಲವು ಬಾರಿ ಈ ರೀತಿ ಹುಸಿ ಕರೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಬೆಂಗಳೂರು ರೈಲ್ವೇ ಅಧಿಕಾರಿಗಳು ಲಗೇಜ್‍ಗೆ ಹೆಚ್ಚಿನ ಹಣ ಪಡೆದಿದರು ಅಂತ ಜಗಳವಾಡಿ, ಸೇಡು ತೀರಿಸಿಕೊಳ್ಳಲು ಅಲ್ಲಿಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಎಂಬ ಅಂಶವೂ ಹೊರಬಂದಿದೆ.

ಇದಲ್ಲದೆ ಪಿಜಿಗಳಲ್ಲಿ ಲ್ಯಾಪ್‍ಟಾಪ್ ಕಳ್ಳತನವನ್ನೂ ಮಾಡಿದ್ದ ಪ್ರಕರಣವೂ ಬೆಳಕಿಗೆ ಬಂದಿತ್ತು. ಆ ಪ್ರಕರಣದಲ್ಲೂ 3 ತಿಂಗಳು ಜೈಲಿಗೆ ಕಳುಹಿಸಲಾಗಿತ್ತು. ಒಟ್ಟು ಬರೋಬ್ಬರಿ 9 ತಿಂಗಳು ಕಾಲ ಜೈಲಿನಲ್ಲಿ ಇದ್ದ ಎಂಬ ಅಂಶ ಹೊರಬಂದಿದೆ.

2012ರಲ್ಲಿ ಬೆಂಗಳೂರಿಗೆ ಕೆಲಸ ಅರಸಿ ಬಂದ ಆದಿತ್ಯ, ನಿರಂತರವಾಗಿ ಕೆಲಸ ಹುಡುಕುತ್ತಿದ್ದ. ಈತನಿಗೆ ಖಾಸಗಿ ಬ್ಯಾಂಕ್ ಅಲ್ಲಿ ಕೆಲಸ ಸಿಕ್ಕಿತ್ತು. ಕೆಲಸ ಬಿಟ್ಟು ಮತ್ತೆ ಮಂಗಳೂರಿಗೆ ವಾಪಸ್ ಆಗಿ, ಸೆಕ್ಯುರಿಟಿ ಗಾರ್ಡ್ ಆಗಿ ಆರು ತಿಂಗಳು ಕೆಲಸ ಮಾಡಿದ್ದ. 2012ರಲ್ಲಿ ಪುತ್ತಿಗೆ ಮಠದಲ್ಲಿ ಅಡುಗೆಯವನಾಗಿಯೂ ಕೆಲಸ ಮಾಡಿದ್ದ. ಬಳಿಕ ಪುತ್ತಿಗೆ ಮಠ ಬಿಟ್ಟು ಬೆಂಗಳೂರಿಗೆ ಬಂದು ಬಳಿಕ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲೂ ಕೂಡ ಕೆಲಸ ಬಿಟ್ಟದ್ದ ಆದಿತ್ಯ, ಏg ಪೋರ್ಟ್ ನಲ್ಲಿ ಸೆಕ್ಯೂರಿಟಿ ಆಗಲು ಪ್ರಯತ್ನಸಿದ್ದ.

Comments

Leave a Reply

Your email address will not be published. Required fields are marked *