ಪೆಕರನಂತೆ ಕೀಳು ಮಟ್ಟದ ಹೇಳಿಕೆ ನೀಡುವವನು ನಾನಲ್ಲ: ಈಶ್ವರಪ್ಪಗೆ ಹೆಚ್‍ಡಿಕೆ ತಿರುಗೇಟು

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ನಡುವೆ ಟ್ವೀಟ್ ವಾರ್ ನಡೆಯುತ್ತಿದೆ. ಈಶ್ವರಪ್ಪನವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಪೆಕರನಂತೆ ಕೀಳು ಮಟ್ಟದ ಹೇಳಿಕೆ ನೀಡುವವನು ನಾನಲ್ಲ ಎಂದು ಸಾಲು ಸಾಲು ಟ್ವೀಟ್ ಮಾಡಿದ್ದಾರೆ.

ಟ್ವೀಟ್ 1: ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡವನು ನಾನಲ್ಲ. ನಿಮ್ಮ ಮೇಲೆ ಅತ್ಯಾಚಾರ ನಡೆದರೆ ಸರ್ಕಾರ ಏನು ಮಾಡೋಕಾಗುತ್ತೆ ಎಂದು ವರದಿಗಾರ್ತಿಗೆ ಪೆಕರನಂತೆ ಪ್ರಶ್ನಿಸಿದವನು ನಾನಲ್ಲ.

ಟ್ವೀಟ್ 2: ಉಪ ಮುಖ್ಯಮಂತ್ರಿ ಹುದ್ದೆ ಯಾರಿಗೆ ಇಷ್ಟವಿಲ್ಲ? ವಯಸ್ಸಿಗೆ ಬಂದವರಿಗೆಲ್ಲರಿಗೂ ನಟಿ ಐಶ್ವರ್ಯ ರೈ ಬೇಕೆಂದು ಬಯಸುತ್ತಾರೆ. ಇರುವುದು ಒಬ್ಬಳೇ ಐಶ್ವರ್ಯ ರೈ ತಾನೇ? ಎಂದು ಡಿಸಿಎಂ ಹುದ್ದೆಯ ಬಗ್ಗೆ ಕೀಳು ಅಭಿರುಚಿ ಮಾತನಾಡಿದವನು ನಾನಲ್ಲ.

ಟ್ವೀಟ್ 3: ನನ್ನ ಕ್ಷೇತ್ರದಲ್ಲಿ 55 ರಿಂದ 60 ಸಾವಿರ ಮುಸ್ಲಿಂರ ವೋಟ್ ಗಳಿವೆ. ಇದೂವರೆಗೂ ಒಬ್ಬ ಮುಸ್ಲಿಮನಿಗೂ ನಮಸ್ಕಾರ ಹೊಡೆದು ವೋಟ್ ಕೇಳಿಲ್ಲ. ಆದ್ರೂ 47ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ರಾಷ್ಟ್ರಭಕ್ತ ಮುಸ್ಲಿಂ ಬಿಜೆಪಿಗೆ ವೋಟ್ ಹಾಕ್ತಾನೆ. ಪಾಕಿಸ್ತಾನ ಪರ ಇರೋ ಮುಸ್ಲಿಂ ಬಿಜೆಪಿಗೆ ವೋಟ್ ಹಾಕಲು ಹಿಂದೆ ಮುಂದೆ ನೋಡ್ತಾರೆ ಎಂದವನು ನಾನಲ್ಲ.

ಟ್ವೀಟ್ 4: ಕುಂದಗೋಳ ವಿಧಾನಸಭೆ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವಾಗಿತ್ತು. ಈ ಬಗ್ಗೆ ಸಿದ್ದರಾಮಯ್ಯ ನಾನು ಏನು ಮಾಡಬೇಕು ಎಂದಿದ್ದರು. ಒಂದು ವೇಳೆ ಸಿದ್ದರಾಮಯ್ಯ ಅವರ ಮೊಮ್ಮಗಳ ಮೇಲೆ ಅತ್ಯಾಚಾರ ನಡೆದರೆ ಏನು ಮಾಡುತ್ತಾರೆ ಎಂಬ ಕೀಳು ಮಟ್ಟದ ಹೇಳಿಕೆ ನೀಡಿದವನು ನಾನಲ್ಲ.

ಟ್ವೀಟ್ 5: ಎಂತೆಂತಹ ಅದ್ಭುತವಾದ ಅಣಿಮುತ್ತುಗಳನ್ನು ಉದುರಿಸಿದ ತಮ್ಮಿಂದ ಯುಗಪುರುಷ ಎಂಬ ಸರ್ಟಿಫಿಕೇಟ್ ಪಡೆಯುವ “ಮೂರ್ಖ ಪುರುಷ” ನಾನಲ್ಲ. ದಿಢೀರ್ ನಿದ್ದೆಯಿಂದ ಎದ್ದಂತೆ ಹಳೆಯ ಹೇಳಿಕೆಗೆ ಟ್ವೀಟ್ ಮಾಡುವವನು ನಾನಲ್ಲ.

ಈಶ್ವರಪ್ಪ ಟ್ವೀಟ್: ಅಂದು ತಿನ್ನಲು ಗತಿ ಇಲ್ಲದವರು ಮಾತ್ರ ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿದ ಈ ಯುಗಪುರುಷ, ಪುಲ್ವಾಮಾ ದಾಳಿಗೆ ಭಾರತೀಯ ಸೈನ್ಯ ಪ್ರತ್ಯುತ್ತರ ನೀಡಿದಾಗ ಸಂಭ್ರಮಾಚರಣೆ ಮಾಡಬೇಡಿ ಒಂದು ಕೋಮಿಗೆ ಬೇಜಾರಾಗುತ್ತದೆ ಎಂದೂ ತಮ್ಮ ಅಣಿಮುತ್ತುಗಳನ್ನ ಉದುರಿಸಿ ಅತ್ತಿದ್ದರು. ಇಂತಹ ಯುಗಪುರುಷನನ್ನು ಪಡೆದ ಕರ್ನಾಟಕವೇ ಧನ್ಯ ಎಂದು ಟ್ವೀಟ್ ಮಾಡಿದ್ದರು.

ಹೆಚ್‍ಡಿಕೆ ಹೇಳಿದ್ದೇನು? ಶುಕ್ರವಾರ ಬೆಳಕಿಗೆ ಬಂದ ಬೆಂಗಳೂರಿನಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಹಿಂದೂ ನಾಯಕರ ಕೊಲೆಗೆ ಸಂಚು ರೂಪಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ, ಕಿಡಗೇಡಿಗಳ ಕೃತ್ಯಕ್ಕೆ ಧರ್ಮದ ಲೇಪನ ಬೇಡ. ಉದ್ದೇಶ ಪೂರ್ವಕವಾಗಿ ಒಂದು ಧರ್ಮ ಟಾರ್ಗೆಟ್ ಮಾಡಬೇಡಿ ಎಂದು ಹೇಳಿದ್ದರು. ಜೊತೆಗೆ ಸಂಸದ ತೇಜಸ್ವಿ ಸೂರ್ಯ ಮತ್ತು ಚಿಂತಕ ಚಕ್ರವರ್ತಿ ಸೂಲಿಬೆಲೆ ಕೊಲೆಗೆ ಸಂಚಿನ ವಿಚಾರವಾಗಿ ಮಾತನಾಡಿದ್ದ ಅವರು, ಸೂಲಿಬೆಲೆ, ತೇಜಸ್ವಿ ಸೂರ್ಯ ಮಹಾನ್ ದೇಶಭಕ್ತರೇನು ಅಲ್ಲ. ಯುಗಪುರುಷರು ಅಲ್ಲ. ಹೀಗಿದ್ರು ಅವರನ್ನು ಹುತಾತ್ಮ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.

Comments

Leave a Reply

Your email address will not be published. Required fields are marked *