ಇದು ನಮಗೆ ತಿಳಿದಿರಲಿಲ್ಲ: ಇಶಾಂತ್ ಕಾಲೆಳೆದ ವಿರಾಟ್

ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯಂತ ಉತ್ಸಾಹಭರಿತ ಕ್ರಿಕೆಟಿಗರಲ್ಲಿ ಒಬ್ಬರು. ಕೊಹ್ಲಿ ಮೈದಾನದಲ್ಲಿ ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಟೀಂ ಇಂಡಿಯಾ ಆಟಗಾರರೊಂದಿಗೆ ತಮಾಷೆಯ ಮಾಡುತ್ತಾರೆ. ಟೀಂ ಇಂಡಿಯಾ ವೇಗದ ಬೌಲರ್ ಇಶಾಂತ್ ಶರ್ಮಾ ಅವರ ಇನ್‍ಸ್ಟಾಗ್ರಾಮ್ ಪೋಸ್ಟ್‍ಗೆ ತಮಾಷೆಯಾಗಿ ಕೊಹ್ಲಿ ಕಮೆಂಟ್ ಮಾಡಿದ್ದಾರೆ.

ಇಶಾಂತ್ ಶರ್ಮಾ ಅವರು ಶನಿವಾರ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ‘ನೀವು ಒಮ್ಮೆ ಮಾತ್ರ ಬದುಕುತ್ತೀರಿ’ ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ತಕ್ಷಣವೇ ಕಮೆಂಟ್ ಮಾಡಿರುವ ಕೊಹ್ಲಿ, ‘ಇದು ನಮಗೆ ತಿಳಿದಿರಲಿಲ್ಲ’ ಎಂದು ಕಾಲೆಳೆದಿದ್ದಾರೆ. ಆಗ ಪ್ರತಿಕ್ರಿಯೆ ನೀಡಿರುವ ಇಶಾಂತ್ ಶರ್ಮಾ, ‘ತಮಾಷೆ ಮಾಡಬೇಡಿ’ ಎಂದು ಕಣ್ಣು ಹೊಡೆಯುವ ಎಮೋಜಿ ಹಾಕಿದ್ದಾರೆ.

https://www.instagram.com/p/B7Lpm2oAubn/?utm_source=ig_embed

ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೊನೆಯ ಬಾರಿಗೆ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಪರ ಆಡಿದ್ದರು. ಈ ಸರಣಿಯಲ್ಲಿ ಶರ್ಮಾ ಅವರು ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಅವರೊಂದಿಗೆ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದರು.

ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 2-0 ಅಂತರದಿಂದ ಕ್ಲೀನ್ ಸ್ವೀಪ್ ದಾಖಲಿಸಿತ್ತು. ಇಶಾಂತ್ ಸರಣಿಯಲ್ಲಿ ಒಟ್ಟು 12 ವಿಕೆಟ್ ಗಳಿಸಿದ್ದರು. ಭಾರತವು ನ್ಯೂಜಿಲೆಂಡ್‍ಗೆ ಆರು ವಾರಗಳ ಸುದೀರ್ಘ ಪ್ರವಾಸ ಕೈಗೊಳ್ಳುತ್ತಿದ್ದು, ಇಶಾಂತ್ ಶರ್ಮಾ ಕೂಡ ತಂಡ ಸೇರುವ ಸಾಧ್ಯತೆ ಇದೆ. ಇದನ್ನೂ ಓದಿ: ಇಶಾಂತ್ ಶರ್ಮಾ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ – ಸರಣಿ ಜಯದೊಂದಿಗೆ ಭಾರತಕ್ಕೆ 360 ಅಂಕ

Comments

Leave a Reply

Your email address will not be published. Required fields are marked *