ಸಿಲಿಕಾನ್ ಸಿಟಿಯಲ್ಲಿ ತೋಳ ಚಂದ್ರಗ್ರಹಣ ವೀಕ್ಷಿಸಿದ ಸಾರ್ವಜನಿಕರು

ಬೆಂಗಳೂರು: ಶುಕ್ರವಾರ ರಾತ್ರಿ ನಭೋ ಮಂಡಲದಲ್ಲಿ ಈ ವರ್ಷದ ಮೊದಲ ಚಂದ್ರಗ್ರಹಣ ನಡೆಯಿತು.

ಚಂದ್ರಗ್ರಹಣದ ಸಂಪೂರ್ಣ ಘೋಚರ ನಮ್ಮ ದೇಶದ ಮೇಲೆ ಆಗದಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಘೋಚರವಾಗಿದೆ. ಹೀಗಾಗಿ ಸಿಲಿಕಾನ್ ಸಿಟಿಯ ಮಲ್ಲೇಶ್ವರಂ ಬಳಿಯ ಗಾಯಿತ್ರಿ ನಗರದ ಅಪಾರ್ಟ್ ಮೆಂಟ್ ಮೇಲೆ ಟಿಲಿ ಸ್ಕೋಪ್ ಮೂಲಕ ಅಲ್ಲಿನ ನಿವಾಸಿಗಳು ನಭೋ ಮಂಡಲದಲ್ಲಿ ಆದ ಕೌತಕವನ್ನ ವೀಕ್ಷಿಸಿದರು.

ಟೆಲಿಸ್ಕೋಪ್ ಮತ್ತು ದೂರದರ್ಶಕದ ಮೂಲಕ ಮಕ್ಕಳು, ಹಿರಿಯರು ಸೇರಿ ಅಪಾರ್ಟ್ ಮೆಂಟ್ ನಿವಾಸಿಗಳೆಲ್ಲಾ ಚಂದ್ರಗ್ರಹಣದ ವೀಕ್ಷಣೆ ಮಾಡಿದರು.

ಇದೇ ಮೊಲದ ಬಾರಿಗೆ ಚಂದ್ರ ಗ್ರಹಣವನ್ನ ಟೆಲಿ ಸ್ಕೋಪ್ ಮೂಲಕ ನೋಡುತ್ತಿದ್ದೇವೆ. ಇಷ್ಟು ಹತ್ತಿರದಿಂದ ಚಂದ್ರನನ್ನ ನೋಡಿದ್ದು ಬಹಳ ಸಂತೋಷವಾಗಿದೆ. ಚಂದ್ರ ಗ್ರಹಣ ಅನ್ನೋದು ಸೌರ ಮಂಡಲದಲ್ಲಿ ನಡೆಯುವ ಪ್ರಕ್ರಿಯೆ ಅದನ್ನ ಬರಿಗಣ್ಣಿನಲ್ಲಿ ನೋಡಬಹುದು. ಆದರೆ ಟೆಲಿಸ್ಕೋಪ್ ಮೂಲಕ ಅತಿ ಹತ್ತಿರದಿಂದ ನೋಡುವುದಕ್ಕೆ ಸಾಧ್ಯವಾಗಿದೆ ಎಂದು ನಿವಾಸಿಗಳು ಸಂತಸಗೊಂಡರು.

Comments

Leave a Reply

Your email address will not be published. Required fields are marked *