ಗರ್ಭಿಣಿಯರಿಗೆ ಗ್ರಹಣ ಭಯ!

ಬೆಂಗಳೂರು: ಇಂದು ರಾತ್ರಿ 2020ರ ದಶಕದ ಮೊಟ್ಟಮೊದಲ ಚಂದ್ರಗ್ರಹಣ ಜರುಗಲಿದೆ. ಈ ಗ್ರಹಣ ಕಾಲ ಕೆಟ್ಟದ್ದು ಅನ್ನೋ ನಂಬಿಕೆ ಹಲವರಲ್ಲಿದೆ. ಈ ಗ್ರಹಣದ ಗರ್ಭಿಣಿಯರ ಮೇಲೆ ಪರಿಣಾಮ ಬೀರುತ್ತೆ ಅನ್ನೋದು ಜ್ಯೋತಿಷಿಗಳ ವಾದ. ಗ್ರಹಣದ ಕಾಲ ಕೆಟ್ಟದ್ದು ಹೀಗಾಗಿ ಇಂದು ಹೆರಿಗೆ ಎಲ್ಲಿ ಆಗಿಬಿಡುತ್ತೋ ಅನ್ನೋ ಆಂತಕದಲ್ಲಿ ಗರ್ಭಿಣಿಯರಿದ್ದಾರೆ. ಹೀಗಾಗಿ ಇಂದು ಮತ್ತು ನಾಳೆ ಹೆರಿಗೆ ಮುಂದೂಡುವಂತೆ ವೈದ್ಯರಿಗೆ ದುಂಬಾಲು ಬಿದ್ದಿದ್ದಾರೆ.

ಚಂದ್ರಗ್ರಹಣಕ್ಕೆ ಬೆಂಗಳೂರಿನ ಗರ್ಭಿಣಿಯರು ಬೆದರಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಇಂದು ಯಾವುದೇ ಸೀಸೇರಿಯನ್‍ಗಳಿಲ್ಲ. ಕೆಲವು ಗರ್ಭಿಣಿಯರು ಮೂರು ದಿನ ಹೆರಿಗೆಯೇ ಬೇಡ ಎನ್ನತ್ತಿದ್ದರೆ, ಮತ್ತೆ ಕೆಲವರು ಗ್ರಹಣದ ವೇಳೆ ರಾತ್ರಿ ಹೆರಿಗೆ ಮೂಂದೂಡಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ವೈದ್ಯರಿಗೆ ಧರ್ಮಸಂಕಟ ಎದುರಾಗಿದೆ.

ಸೀಸೇರಿಯನ್ ಪೋಸ್ಟ್ ಪೋನ್ ಮಾಡಬಹುದು. ಆದರೆ ನಾರ್ಮಲ್ ಡೆಲಿವರಿ ಆದರೆ ಏನು ಮಾಡಲು ಆಗಲ್ಲ. ವೈಜ್ಞಾನಿಕವಾಗಿ ಗ್ರಹಣ ಗರ್ಭಿಣಿಯರ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೂ ಗರ್ಭಿಣಿಯರ ಸೈಕಾಲಜಿ ಮೇಲೆ ಗ್ರಹಣ ಪರಿಣಾಮ ಬೀರಿದ್ದು, ಇಂದಿನ ಗ್ರಹಣಕ್ಕೆ ಬೆಚ್ಚಿಬಿದ್ದಿದ್ದಾರೆ.

Comments

Leave a Reply

Your email address will not be published. Required fields are marked *