ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಮನವಿ

ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಗೆ ದೇಶದಲ್ಲಿ ಉತ್ತಮ ಹೆಸರಿದೆ. ಇಂತಹ ಸಾರಿಗೆ ಇಲಾಖೆಯಲ್ಲಿ ನಾಲ್ಕು ನಿಗಮಗಳಿದ್ದು, ನಾಲ್ಕು ನಿಗಮದ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ.

ಇಂದು ನಾಲ್ಕು ನಿಗಮದ ನೌಕರರು ಬೃಹತ್ ಕಾಲ್ನಡಿಗೆ ಜಾಥಾ ಮಾಡಲು ನಿರ್ಧಾರ ಮಾಡಿದ್ದು ಇಂದು ಮಧ್ಯಾಹ್ನ ಲಾಲ್ ಬಾಗ್ ನ ಕೆಂಗಲ್ ಗೇಟ್ ನಿಂದ ಶಾಂತಿನಗರದ ಕೆಎಸ್‍ಆರ್ ಟಿಸಿ ಮುಖ್ಯ ಕಚೇರಿಯವರಗೆ ಬೃಹತ್ ರ‍್ಯಾಲಿಯನ್ನ ಹಮ್ಮಿಕೊಂಡಿದ್ದಾರೆ. ಈ ಸಾರಿಗೆ ನೌಕರರ ಜಾಥಾದಲ್ಲಿ ಕೊಳದ ಮಠದ ಸ್ವಾಮೀಜಿ ಡಾ. ಶಾಂತವೀರ ಮಹಾಸ್ವಾಮೀಜಿ, ಹಿರಿಯ ಸಾಹಿತಿ ಡಾ. ಹಂ.ಪ ನಾಗರಾಜಯ್ಯ, ಕಮಲ ಹಂಪನಾ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.

ಕಾಲ್ನಡಿಗೆ ಮೂಲಕ ಬೃಹತ್ ಜಾಥಾ ಮಾಡಿದ ಬಳಿಕ ಕೆಎಸ್ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ಅವರಿಗೆ ಮನವಿ ಪತ್ರ ನೀಡಲಿದ್ದಾರೆ. ಬೃಹತ್ ಜಾಥಾದಿಂದ ಯಾವುದೇ ರೀತಿಯಲ್ಲೂ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಆಗುವುದಿಲ್ಲ. ಪಾಳಿ ಮುಗಿದ ನೌಕರರು, ರಜೆಯಲ್ಲಿರೋ ನೌಕರರು ಮಾತ್ರ ಜಾಥಾದಲ್ಲಿ ಭಾಗಿಯಾಗಲ್ಲಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಗಳು ಆಗೋದಿಲ್ಲ ಎಂಬುದಾಗಿ ತಿಳಿದುಬಂದಿಲ್ಲ.

Comments

Leave a Reply

Your email address will not be published. Required fields are marked *